ಮೈಸೂರು: ಕ್ರಿಕೆಟ್‌ನ ಜೀವಂತ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಆರು ಪ್ರಮುಖರಿಗೆ ಗೌರವ ಡಾಕ್ಟರೇಟ್ ನೀಡಲು ಮೈಸೂರು ವಿಶ್ವ ವಿದ್ಯಾಲಯ ನಿರ್ಧರಿಸಿದೆ. ಈ ನಡುವೆ ರಾಜ್ಯದ ಕ್ರಿಕೆಟಿಗರನ್ನು ನಿರ್ಲಕ್ಷಿಸಲಾಗಿದೆಯೆಂಬ ಅಪವಾದವೂ ಕೇಳಿಬರುತ್ತಿವೆ.
ಸಚಿನ್‌ಗೆ ಗೌರವ ಡಾಕ್ಟರೇಟ್ ನೀಡುವುದು ಓಕೆ. ಇದರಲ್ಲಿ ಯಾವುದೇ ತರ್ಕವೂ ಇಲ್ಲ. ಆದರೆ ರಾಜ್ಯ ಸೇರಿದಂತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ಸಲ್ಲಿಸಿರುವ ಜಾವಗಲ್ ಶ್ರೀನಾಥ್‌ರಂತಹ ಆಟಗಾರರನ್ನು ಕಡೆಗಣಿಸಿರುವುದು ಕನ್ನಡ ಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ಮೈಸೂರಿನ ಮಾಜಿ ಮಹಾರಾಜಾ ದಿವಂಗತ ನಲ್ವಾಡಿ ಕೃಷ್ಣಾ ರಾಜಾ ವಡೇಯಾರ್ ಮತ್ತು ಕಾನೂನು ಸಚಿವ ಎಮ್. ವೀರಪ್ಪ ಮೊಯ್ಲಿ ಸೇರಿದಂತೆ ಆರು ಮಂದಿಗೆ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸು ಮಾಡಲಾಗಿದೆ.
ಆದರೆ ರಾಜ್ಯದ ಕ್ರಿಕಟಿಗರಿಗೆ ಮನ್ನಣೆ ನೀಡಿಲ್ಲ, ಕನ್ನಡಿಗರ ಸಾಧನೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಟೀಕಿಸಲಾಗಿದೆ.