ಏಕದಿನ ವಿಶ್ವಕಪ್ ಬಳಿಕ ವೆಟ್ಟೋರಿ ನಾಯಕತ್ವಕ್ಕೆ ಗುಡ್‌ಬೈ

ಗುರುವಾರ, 20 ಜನವರಿ 2011 (13:06 IST)
PTI
ಸತತ ಸೋಲಿನಿಂದ ಬೆಸತ್ತಿರುವ ನ್ಯೂಜಿಲೆಂಡ್ ತಂಡದ ನಾಯಕ ಡ್ಯಾನಿಯಲ್ ವಿಟ್ಟೋರಿ ಕೊನೆಗೂ ತಮ್ಮ ನಾಯಕತ್ವ ತ್ಯಜಿಸಲು ಮುಂದಾಗಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ ಬಳಿಕ ನಾಯಕತ್ವಕ್ಕೆ ಗುಡ್‌ಬೈ ಹೇಳುವುದಾಗಿ ವಿಟ್ಟೋರಿ ಪ್ರಕಟಿಸಿದ್ದಾರೆ.

2007ರಲ್ಲಿ ಸ್ಟೀಫನ್ ಫ್ಲೆಮಿಂಗ್ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಆಫ್ ಸ್ಪಿನ್ನರ್ ವಿಟ್ಟೋರಿ, ಹಲವು ಮಹತ್ವದ ಸರಣಿಗಳಲ್ಲಿ ಕಿವೀಸ್ ಪರ ನಿರ್ಣಾಯಕ ಪಾತ್ರ ವಹಿಸಿದ್ದರು.

31ರ ಹರೆಯದ ವಿಟ್ಟೋರಿ ನಾಯಕತ್ವ ತ್ಯಜಿಸುವ ಹಿನ್ನೆಲೆಯಲ್ಲಿ ಇದೀಗ ಉಪನಾಯಕರಾಗಿರುವ ರಾಸ್ ಟಯ್ಲರ್ ಈ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಆದರೆ ನೂತನ ನಾಯಕನ ಅಡಿಯಲ್ಲಿ ನಾನು ಆಡುವುದನ್ನು ಮುಂದುವರಿಸಲು ಬಯಸುವುದಾಗಿಯೂ ವೆಟ್ಟೋರಿ ತಿಳಿಸಿದ್ದಾರೆ.

ವೆಟ್ಟೋರಿ ನಾಯಕತ್ವದಲ್ಲಿ ಕಿವೀಸ್ ಪ್ರದರ್ಶನ ಬಹಳ ಕೆಟ್ಟದಾಗಿತ್ತಲ್ಲದೆ ಒಟ್ಟು 32 ಟೆಸ್ಟ್‌ಗಳಲ್ಲಿ 16ರಲ್ಲಿ ಸೋಲು ಅನುಭವಿಸಿತ್ತು. ಉಳಿದಂತೆ 6ರಲ್ಲಿ ಜಯ ಹಾಗೂ 10 ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು. ಈ ಪೈಕಿ ಬಾಂಗ್ಲಾದೇಶ ವಿರುದ್ಧ 4 ಹಾಗೂ ತಲಾ ಒಂದರಂತೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿತ್ತು.

ಆದರೆ ನಾಯಕನಾಗಿ 33.38ರ ಸರಾಸರಿಯಲ್ಲಿ 116 ವಿಕೆಟ್ ಕಿತ್ತಿದ್ದ ವೆಟ್ಟೋರಿ ನಾಲ್ಕು ಶತಕ ಹಾಗೂ ಒಂಬತ್ತು ಅರ್ಧಶತಕಗಳು ಸೇರಿದಂತೆ ಒಟ್ಟು 1917 ರನ್ ಗಳಿಸಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ