ನಿರ್ಣಾಯಕ ಹಣಾಹಣಿ: ನಾಯಕ ಧೋನಿ ಕೂಡಾ ಗಾಯಾಳು?

ಶುಕ್ರವಾರ, 21 ಜನವರಿ 2011 (10:02 IST)
ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ತನ್ನ ಐತಿಹಾಸಿಕ ಏಕದಿನ ಸರಣಿ ಗೆಲುವನ್ನು ಎದುರು ನೋಡುತ್ತಿದೆ. ಆದರೆ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಗಾಯದ ಆತಂಕಕ್ಕೆ ಸಿಲುಕಿರುವುದು ತಂಡದ ಹಿನ್ನೆಡೆಗೆ ಕಾರಣವಾಗಿದೆ.

ಅಭ್ಯಾಸದ ಸಂದರ್ಭದಲ್ಲಿ ಧೋನಿ ಮೊಣಕಾಲಿಗೆ ಗಾಯಮಾಡಿಕೊಂಡಿದ್ದಾರೆ. ಆದರೆ ಆತಂಕದ ವಿಷಯವಲ್ಲ. ಈ ಮಹತ್ವದ ಪಂದ್ಯಕ್ಕೆ ನಾಯಕ ಲಭ್ಯರಾಗಲಿದ್ದಾರೆ ಎಂದು ತಂಡದ ಮ್ಯಾನೇಜರ್ ರಣಜಿಬ್ ಬಿಸ್ವಾಲ್ ಖಚಿತಪಡಿಸಿದ್ದಾರೆ.

ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್‌ರಂತಹ ಅಗ್ರ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿರುವ ಭಾರತಕ್ಕೆ ನಾಯಕ ಧೋನಿ ಕೂಡಾ ಅಲಭ್ಯರಾದರೆ ಅದು ದೊಡ್ಡ ಹಿನ್ನೆಡೆಯೇ ಸರಿ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ನಾಯಕ ಧೋನಿ ಆಡುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದಾರೆ.

ಹಾಗೆಯೇ ಸಚಿನ್ ಸ್ಥಾನದಲ್ಲಿ ತಂಡದಲ್ಲಿ ಸೇರಿಕೊಂಡಿರುವ ಪಾರ್ಥಿವ್ ಆಡುವ ಸಾಧ್ಯತೆ ಹೆಚ್ಚಿದೆ. ಪದೇ ಪದೇ ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ಮುರಳಿ ವಿಜಯ್ ಸ್ಥಾನವನ್ನು ಈ ಎಡಗೈ ಆಟಗಾರ ವಶಪಡಿಸಿಕೊಳ್ಳುವ ಸಾಧ್ಯತೆಯಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ