ಪದ್ಮಶ್ರೀ ಗೌರವ ಶ್ರೇಷ್ಠ ಹಾಗೂ ತೃಪ್ತಿದಾಯಕ: ಲಕ್ಷ್ಮಣ್

ಗುರುವಾರ, 27 ಜನವರಿ 2011 (16:22 IST)
ದೇಶದ ನಾಲ್ಕನೇ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ ಪದ್ಮ ಶ್ರೀ ಗೌರವಕ್ಕೆ ಭಾರತದ ಕಲಾತ್ಮಕ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಭಾಜನರಾಗಿದ್ದರು. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ್, ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ನನ್ನ ಸಾಧನೆಗಳನ್ನು ಗುರುತಿಸಿರುವುದು ಶ್ರೇಷ್ಠ ಹಾಗೂ ತೃಪ್ತಿದಾಯಕ ಕ್ಷಣ ಎಂದರು.

ದೇಶದ ಪ್ರತಿಷ್ಠಿತ ಪ್ರಶಸ್ತಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿರುವುದು ಶ್ರೇಷ್ಠ ಕ್ಷಣ. ಆ ಮೂಲಕ ನನ್ನ ಸಾಧನೆಗೆ ಮನ್ನಣೆ ಲಭಿಸಿದೆ. ಇಷ್ಟು ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿರುವುದೇ ಮಹತ್ತರವಾಗಿದೆ ಎಂದು ಹೇಳಿದರು.

ಕ್ರಿಕೆಟ್ ಮೇಲಿರುವ ಪ್ರೀತಿ, ಹಂಬಲ ಹಾಗೂ ಕಠಿಣ ಪ್ರಯತ್ನವೇ ಕ್ರೀಡಾಜೀವನದ ಯಶಸ್ಸಿಗೆ ಕಾರಣ ಎಂದವರು ಸೇರಿಸಿದರು. ಈ ಸಂದರ್ಭದಲ್ಲಿ ನನ್ನ ಪ್ರತಿಭೆಯನ್ನು ಗುರುತಿಸಿದ ತಂದೆ ಹಾಗೂ ಮಾವನಿಗೆ ಧನ್ಯವಾದ ಹೇಳಲು ಇಚ್ಛೆ ಪಡುತ್ತೇನೆ. ಮಾವ ಸ್ಫೂರ್ತಿ ತುಂಬಿದ್ದರಿದಂಲೇ ನಾನು ಕ್ರಿಕೆಟನ್ನು ಗಂಭೀರವಾಗಿ ಪರಿಗಣಿಸಿದ್ದೆ ಎಂದವರು ಹೇಳಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ