ಸಚಿನ್ ಶತಕ ತಡೆಯುವುದಾದರೂ ಹೇಗೆ: ಆಫ್ರಿದಿ ಯೂ ಟರ್ನ್

ಮಂಗಳವಾರ, 29 ಮಾರ್ಚ್ 2011 (15:30 IST)
PTI
ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ 100ನೇ ಶತಕ ದಾಖಲಿಸಲು ಬಿಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದ ಪಾಕಿಸ್ತಾನ ನಾಯಕ ಶಾಹಿದ್ ಆಫ್ರಿದಿ ಇದೀಗ ಯೂ ಟರ್ನ್ ಮಾಡಿದ್ದಾರೆ.

ನಾನು ಅಂತಹ ಹೇಳಿಕೆ ನೀಡಲೇ ಇಲ್ಲ. ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಯಾವುದೇ ಬ್ಯಾಟ್ಸ್‌ಮನ್ ರನ್ ಗಳಿಸುವುದನ್ನು ತಡೆಯುವುದಾದರೂ ಹೇಗೇ? ಎಂದು ಮರು ಪ್ರಶ್ನೆ ಹಾಕಿದ್ದಾರೆ.

ನಾನು ಕೂಡಾ ಸಚಿನ್ ಅವರ ಕಟ್ಟಾ ಅಭಿಮಾನಿ. ಕರಾಚಿನಲ್ಲಿರುವ ಡ್ರೆಸ್ಸಿಂಗ್ ಕೊಠಡಿಯಲ್ಲಿ ತೆಂಡೂಲ್ಕರ್ ಶರ್ಟನ್ನು ಫ್ರೇಮ್ ಹಾಕಿ ಇರಿಸಿದ್ದೇನೆ ಎಂದವರು ಹೇಳಿದರು.

ಪ್ರಸ್ತುತ ವಿಶ್ವಕಪ್‌ನಲ್ಲಿ ಸಚಿನ್ ತನ್ನ ಕ್ರೀಡಾ ಬಾಳ್ವೆಯ 100ನೇ ಶತಕವನ್ನು ಎದುರು ನೋಡುತ್ತಿದ್ದಾರೆ. ಆದರೆ ಆ ಕ್ಷಣಕ್ಕಾಗಿ ವಿಶ್ವಕಪ್ ಮುಗಿಯುವ ವರೆಗೂ ಸಚಿನ್ ಕಾಯಬೇಕಾಗುತ್ತದೆ. ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಬಾರಿಸುವುದನ್ನು ತಡೆಗಟ್ಟಲಿದ್ದೇವೆ ಎಂದು ಆಫ್ರಿದಿ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ ಇವೆಲ್ಲವನ್ನು ನಿರಾಕರಿಸಿರುವ ಆಫ್ರಿದಿ ಇಂತಹ ಸಂದರ್ಶನವನ್ನು ನಾನು ನೀಡಿಲ್ಲ. ನಾನವತ್ತೂ ಅತಂಹ ಹೇಳಿಕೆ ನೀಡಿಲ್ಲ. ಎದುರಾಳಿ ತಂಡದ ನಾಯಕನಾದ ನಾನು ಸಚಿನ್‌ಗೆ ರನ್ ದಾಖಲಿಸಲು ಅವಕಾಶ ನೀಡುವುದಿಲ್ಲ ಆದಷ್ಟು ಬೇಗ ಔಟ್ ಮಾಡಲು ಯತ್ನಿಸುತ್ತೇನೆ ಎಂದು ಹೇಳಿದ್ದೆ. ಆದರೆ ಅವರನ್ನು ತಡೆಯುವುದು ನಮ್ಮ ಅಧೀನತೆಯಲ್ಲಿಲ್ಲ ಎಂದವರು ಸ್ಪಷ್ಟನೆ ನೀಡಿದರು.

ಸಚಿನ್ ಶ್ರೇಷ್ಠ ಆಟಗಾರ. ಒಂದು ವೇಳೆ ಅವರು ಶತಕ ಬಾರಿಸಿದ್ದಲ್ಲಿ ಇದು ಅವರ ಶ್ರೇಷ್ಠತೆಗೆ ಮತ್ತೊಂದು ಮೈಲುಗಲ್ಲು ಆಗಿರಲಿದೆ ಎಂದು ಆಫ್ರಿದಿ ಸೇರಿಸಿದರು.

ವೆಬ್ದುನಿಯಾವನ್ನು ಓದಿ