Mohammed Siraj: ಮೊಹಮ್ಮದ್ ಸಿರಾಜ್ ಗೆ ವಜ್ರದ ಉಂಗುರ ಗಿಫ್ಟ್ ಮಾಡಿದ ರೋಹಿತ್ ಶರ್ಮಾ

Krishnaveni K

ಮಂಗಳವಾರ, 6 ಮೇ 2025 (10:59 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವೇಗಿ ಮೊಹಮ್ಮದ್ ಸಿರಾಜ್ ಗೆ ವಜ್ರದ ಉಂಗುರವನ್ನು ಗಿಫ್ಟ್ ಮಾಡಿದ್ದಾರೆ. ಅಷ್ಟಕ್ಕೂ ಯಾವ ಕಾರಣಕ್ಕೆ ಇಲ್ಲಿದೆ ಡೀಟೈಲ್ಸ್.

ಟಿ20 ವಿಶ್ವಕಪ್ ವಿಜೇತ ತಂಡಕ್ಕೆ ಬಿಸಿಸಿಐ ನಮನ್ ಅವಾರ್ಡ್ ಕಾರ್ಯಕ್ರಮದಲ್ಲಿ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿತ್ತು. ಆದರೆ ಆ ಸಮಾರಂಭಕ್ಕೆ ಮೊಹಮ್ಮದ್ ಸಿರಾಜ್ ಗೈರು ಹಾಜರಾಗಿದ್ದರು.

ಹೀಗಾಗಿ ಇದೀಗ ರೋಹಿತ್ ಶರ್ಮಾ ಮೂಲಕ ಬಿಸಿಸಿಐ ಮೊಹಮ್ಮದ್ ಸಿರಾಜ್ ಗೆ ಉಡುಗೊರೆ ನೀಡಿದೆ. ಸದ್ಯಕ್ಕೆ ಎಲ್ಲಾ ಆಟಗಾರರೂ ಐಪಿಎಲ್ ಕೂಟದಲ್ಲಿ ಬ್ಯುಸಿಯಾಗಿದ್ದಾರೆ. ರೋಹಿತ್ ಶರ್ಮಾ ಮುಂಬೈ ಪರ ಆಡುತ್ತಿದ್ದರೆ ಸಿರಾಜ್ ಗುಜರಾತ್ ಪರ ಆಡುತ್ತಾರೆ.

ಇಂದು ಮುಂಬೈ ಮತ್ತು ಗುಜರಾತ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಅಭ್ಯಾಸ ಮಾಡುತ್ತಿರುವಾಗ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್ ಗೆ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ