ಭಾರತ-ಪಾಕ್ ಸೆಮಿಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್?

ಶುಕ್ರವಾರ, 1 ಏಪ್ರಿಲ್ 2011 (11:24 IST)
ಭಾರತ ಮತ್ತು ಪಾಕಿಸ್ತಾನ ನಡುವಣ ಸೆಮಿಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು ಎಂಬುದರ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಈ ಸಂಬಂಧ ಪಾಕಿಸ್ತಾನ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಸಂಯುಕ್ತ ತನಿಖಾ ಏಜೆನ್ಸಿ ಮತ್ತು ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ ತನಿಖೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ.

ಮೊಹಾಲಿಯಲ್ಲಿ ಪಾಕಿಸ್ತಾನ ವಿರುದ್ಧ ಸೆಮಿಫೈನಲ್ ಪಂದ್ಯವನ್ನು 29 ರನ್ನುಗಳಿಂದ ಗೆದ್ದುಕೊಂಡಿದ್ದ ಭಾರತ ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನ ಫೈನಲ್‌ಗೆ ತಲುಪಿತ್ತು. ಇದೀಗ ಪಂದ್ಯದಲ್ಲಿ ಮೋಸದಾಟ ನಡೆದಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.

ಭಾರತದ ಪರವಾಗಿ ಪಾಕ್ ಆಟಗಾರರು ಫಿಕ್ಸಿಂಗ್ ನಡೆಸಿದ್ದರು ಎಂಬ ಆರೋಪಗಳಿವೆ. ಈ ಸಂಬಂಧ ಲಾಹೋರ್ ಹೈಕೋರ್ಟ್‌ನಲ್ಲಿ ಮೊಹಮ್ಮದ್ ಇರ್ಫಾನ್ ಮುಖ್ತಾರ್ ಎಂಬಾತನಿಂದ ಅರ್ಜಿ ಸಲ್ಲಿಸಿಲಾಗಿದೆ.

ಭಾರತದ ವಿರುದ್ಧ ಪಾಕಿಸ್ತಾನ ಪಂದ್ಯ ಸೋತಿರುವ ರೀತಿಯನ್ನೇ ನೋಡಿದರೆ ಪಂದ್ಯ ಫಿಕ್ಸ್ ಆಗಿರುವುದು ಖಚಿತವಾಗುತ್ತಿದೆ. ಪಂದ್ಯದಲ್ಲಿ ನಾಲ್ಕು ಕ್ಯಾಚುಗಳನ್ನು ಪಾಕ್ ಆಟಗಾರರು ಕೈಚೆಲ್ಲಿದ್ದರು ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ.

ವೆಬ್ದುನಿಯಾವನ್ನು ಓದಿ