ಭಾರತ-ಲಂಕಾ ಫೈನಲ್; ದಾಖಲೆಗಳತ್ತ ಒಮ್ಮೆ ಕಣ್ಣಾಯಿಸಿ...

ಶುಕ್ರವಾರ, 1 ಏಪ್ರಿಲ್ 2011 (18:03 IST)
ಇದೇ ಮೊದಲ ಬಾರಿಗೆ ಏಷ್ಯಾದ ಎರಡು ಪ್ರಬಲ ತಂಡಗಳು ವಿಶ್ವಕಪ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ. ಈ ಮಹಾಕೂಟದ ಎರಡು ಆತಿಥ್ಯ ರಾಷ್ಟ್ರಗಳೇ ಫೈನಲ್‌ಗೆ ತಲುಪಿರುವುದು ಮತ್ತೊಂದು ವಿಶೇಷವಾಗಿದೆ.

ಶನಿವಾರ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಇಡೀ ವಿಶ್ವದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ 100ನೇ ಅಂತರಾಷ್ಟ್ರೀಯ ಶತಕವನ್ನು ಎದುರು ನೋಡುತ್ತಿದ್ದಾರೆ.

ಒಟ್ಟಾರೆಯಾಗಿ ಫಲಿತಾಂಶ ಗಮನಿಸಿದಾಗ ಭಾರತವೇ ಮುಂದಿದೆ. ಭಾರತ ಒಟ್ಟು 67 ಪಂದ್ಯಗಳಲ್ಲಿ ಜಯ ದಾಖಲಿಸಿದ್ದರೆ ಶ್ರೀಲಂಕಾ 50ರಲ್ಲಿ ಜಯ ಸಾಧಿಸಿದೆ.

ಹೆಡ್ ಟು ಹೆಡ್:
ಭಾರತ: 67 ಗೆಲುವು
ಶ್ರೀಲಂಕಾ: 50 ಗೆಲುವು
ಫಲಿತಾಂಶವಿಲ್ಲ: 11

ವಿಶ್ವಕಪ್‌ನಲ್ಲಿ:
ಶ್ರೀಲಂಕಾ: 4 ಗೆಲುವು
ಭಾರತ: 2 ಗೆಲುವು

ಉಪಖಂಡದಲ್ಲಿ
ಭಾರತ: 59 ಗೆಲುವು
ಶ್ರೀಲಂಕಾ: 46 ಗೆಲುವು
ಪಲಿತಾಂಶವಿಲ್ಲ: 9

ಕೊನೆಯ ಐದು ಪಂದ್ಯಗಳ ಫಲಿತಾಂಶ:
ಜೂನ್, ದಾಂಬುಲಾ 2010: ಲಂಕಾಗೆ ಏಳು ವಿಕೆಟ್ ಜಯ
ಜೂನ್, ದಾಂಬುಲಾ 2010: ಭಾರತಕ್ಕೆ 81 ರನ್ ಜಯ
ಆಗಸ್ಟ್, ದಾಂಬುಲಾ 2010: ಭಾರತಕ್ಕೆ ಆರು ವಿಕೆಟುಗಳ ಜಯ
ಆಗಸ್ಟ್, ದಾಂಬುಲಾ 2010: ಶ್ರೀಲಂಕಾಗೆ ಎಂಟು ವಿಕೆಟುಗಳ ಜಯ
ಆಗಸ್ಟ್, ದಾಂಬುಲಾ 2010: ಶ್ರೀಲಂಕಾಗೆ 74 ರನ್ ಜಯ

ವಾಂಖೆಡೆ ಮೈದಾನದಲ್ಲಿ: 1-1ರ ಸಮಬಲ
1987ರಲ್ಲಿ ಭಾರತಕ್ಕೆ 10 ರನ್ನುಗಳ ಜಯ
1997ರಲ್ಲಿ ಶ್ರೀಲಂಕಾಗೆ ಐದು ವಿಕೆಟುಗಳ ಜಯ

ಪ್ರಸಕ್ತ ವಿಶ್ವಕಪ್‌ನಲ್ಲಿ ಇತ್ತಂಡಗಳ ಸಾಧನೆ
ಭಾರತಕ್ಕೆ ಗ್ರೂಪ್ 'ಬಿ' ನಲ್ಲಿ ದ್ವಿತೀಯ ಸ್ಥಾನ (WWWLWWTW)
ಶ್ರೀಲಂಕಾಕ್ಕೆ ಗ್ರೂಪ್ 'ಎ'ನಲ್ಲಿ ದ್ವಿತೀಯ ಸ್ಥಾನ (WWWW,NR,WLW)

ವೆಬ್ದುನಿಯಾವನ್ನು ಓದಿ