ಫೈನಲ್ ಫಲಿತಾಂಶದಿಂದ ಧೋನಿ ನಾಯಕತ್ವ ಅಳೆಯಬಾರದು

ಶನಿವಾರ, 2 ಏಪ್ರಿಲ್ 2011 (09:22 IST)
ಶ್ರೀಲಂಕಾ ವಿರುದ್ಧ ನಡೆಯಲಿರುವ ಫೈನಲ್ ಫಲಿತಾಂಶವೊಂದರಿಂದಲೇ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ಕೌಶಲ್ಯವನ್ನು ಅಳೆಯಬಾರದು ಎಂದು ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತ ಯಾವುದೇ ಫಲಿತಾಂಶ ದಾಖಲಿಸಲಿ, ಆದರೆ ಧೋನಿ ಕೌಶಲದ ಬಗ್ಗೆ ಅನುಮಾನ ಪಡೆಲಾರೆ. ಬಹುತೇಕ ಮಂದಿ ಫೈನಲ್ ಪಂದ್ಯದ ಫಲಿತಾಂಶದ ಆಧಾರದಲ್ಲಿ ಧೋನಿ ನಾಯಕತ್ವವನ್ನು ಅಳೆಯುತ್ತಾರೆ. ಆದರೆ ನಾನು ಹಾಗೆ ಮಾಡಲಾರೆ ಎಂದು 1983ರ ವಿಶ್ವಕಪ್ ವಿಜೇತ ನಾಯಕ ನುಡಿದರು.

ನೀವು ಪಾಂಟಿಂಗ್ ಅವರನ್ನೇ ಗಮನಿಸಿ. ಅವರು ಆಸ್ಟ್ರೇಲಿಯಕ್ಕೆ ಸತತ ಎರಡು ವಿಶ್ವಕಪ್ ತಂದು ಕೊಟ್ಟರು. ಆದರೆ ಕೆಲವ ಒಂದು ವಿಶ್ವಕಪ್‌ನ ಕಳಪೆ ಪ್ರದರ್ಶನನಿಂದ ಅವರನ್ನು ಕಡೆಗಣಿಸಲಾಯಿತು. ಆದರೆ ನಾಯಕತ್ವವನ್ನು ಆ ರೀತಿ ಅಳೆಯಬಾರದು. ಹೀಗಾಗಿ ಭಾರತ ಸೋಲಲಿ ಅಥವಾ ಗೆಲ್ಲಲಿ, ಆ ಮಾನದಂಡದಿಂದ ಧೋನಿ ನಾಯಕತ್ವನನ್ನು ಅಳೆಯಬಾರದು. ಇದರ ಬದಲು ಶನಿವಾರದ ಫೈನಲ್ ಪಂದ್ಯಕ್ಕೆ ಶುಭ ಹಾರೈಸೋಣ ಎಂದರು.

ಧೋನಿ ಅವರೋರ್ವ ಗ್ಯಾ೦ಬ್ಲರ್. ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು ಹಾಗೂ ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಆರಂಭದಲ್ಲಿ ಎಲ್ಲರೂ ಪಾಕಿಸ್ತಾನ ವಿರುದ್ಧ ಅಶ್ವಿನ್ ಅವರನ್ನು ಕೈಬಿಟ್ಟಿದ್ದಕ್ಕೆ ಪ್ರಶ್ನೆ ಮಾಡಿದ್ದರು. ಆದರೆ ಅಂತಿಮವಾಗಿ ಧೋನಿ ಅವರ ಆಯ್ಕೆಯೂ ಸರಿಯೆನಿಸಿತ್ತು. ವೇಗಿ ಆಶಿಶ್ ನೆಹ್ರಾ ಅದ್ಭುತವಾಗಿ ದಾಳಿ ಸಂಘಟಿಸಿದ್ದರು. ಆದರೆ ಶ್ರೀಲಂಕಾ ವಿರುದ್ಧ ಗೆಲ್ಲುವ ಸಾಮರ್ಥ್ಯ ಭಾರತಕ್ಕಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದವರು ವಿವರಿಸಿದರು.

ವೆಬ್ದುನಿಯಾವನ್ನು ಓದಿ