ವಿಶ್ವಕಪ್ ಸಂಭ್ರಮ ಹೇಗೆ ಆಚರಿಸಬೇಕು ಎನ್ನುವ ಗೊಂದಲ: ಧೋನಿ

ಭಾನುವಾರ, 3 ಏಪ್ರಿಲ್ 2011 (10:06 IST)
PTI
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವಿನ ಸಿಕ್ಸರ್ ಬಾರಿಸಿದ ಟೀಂ ಇಂಡಿಯಾ ತಂಡದ ನಾಯಕ ಧೋನಿ, ಗೆಲುವಿನ ಸಂಭ್ರಮವನ್ನು ಹೇಗೆ ಆಚರಿಸಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದು ಉದ್ಘರಿಸಿದರು.

ಗೆಲುವಿನ ಸಿಕ್ಸರ್ ಬಾರಿಸಿದ ನಂತರ ವಿಜಯೋತ್ಹಾಹ ಏಕೆ ಆಚರಿಸಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಧೋನಿ, ತುಂಬಾ ಭಾವೋದ್ರೇಕದಲ್ಲಿದ್ದೆ. ಸಿಕ್ಸರ್ ಬಾರಿಸಿ ನಾನು ಅರ್ಧ ಪಿಚ್‌ಗೆ ಬಂದಾಗಿತ್ತು. ನನಗೆ ಸ್ಟಂಪ್‌ ತೆಗೆದುಕೊಳ್ಳಬೇಕು ಎಂದು ಬಯಸಿದ್ದೆ. ಆದರೆ, ಯುವರಾಜ್ ಕೂಡಾ ನಾನ್ ಸ್ಟ್ರೈಕರ್ ಎಂಡ್‌ನಲ್ಲಿದ್ದರು. ನನಗೆ ಸ್ಟಂಪ್ ಅವರು ತೆಗೆದುಕೊಳ್ಳುತ್ತಾರೆ ಎನ್ನುವ ಆತಂಕವಾಯಿತು.ಯುವರಾಜ್ ಅವರನ್ನು ತಬ್ಬಿಕೊಳ್ಳುವುದು ಬಿಟ್ಟು ಸ್ಟಂಪ್ ತೆಗೆದುಕೊಳ್ಳುವುದು ಮುಖ್ಯ ಎಂದು ನನಗನ್ನಿಸಿದ್ದರಿಂದ ಗೊಂದಲ ಸೃಷ್ಟಿಯಾಯಿತು ಎಂದು ಹೇಳಿದ್ದಾರೆ.

ವಿರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ವಿಕೆಟ್ ಪತನದ ನಂತರವು ವಾಂಖೇಡೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸಹಸ್ರಾರು ಪ್ರೇಕ್ಷಕರು ತೋರಿದ ಭಾರಿ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದರು.

ಕಳೆದ ಒಂದುವರೆ ವರ್ಷಗಳ ಹಿಂದೆ, ತಂಡದ ಪ್ರತಿಯೊಬ್ಬರಿಗಾಗಿ ಹಾಗೂ ರಾಷ್ಟ್ರಕ್ಕಾಗಿ ವಿಶ್ವಕಪ್ ಗೆಲ್ಲುವುದೆಂದು ತಂಡ ನಿರ್ಧರಿಸಿತ್ತು.ತಂಡದ ನಿರೀಕ್ಷೆಯಂತೆ ವಿಶ್ವಕಪ್ ನಮ್ಮ ಮಡಿಲಿಗೆ ಬಿದ್ದಿದೆ ಎಂದರು.

ವಿಶ್ವಕಪ್ ಗೆಲ್ಲುವ ಗುರಿಯನ್ನಿಟ್ಟುಕೊಂಡು ತಂಡವನ್ನು ಸಜ್ಜುಗೊಳಿಸಲಾಯಿತು. ವಿಶ್ವಕಪ್‌ಗೆ ಮುನ್ನ ತಂಡದ ಆಟಗಾರರು ಗಾಯಗೊಳ್ಳಬಾರದು ಎನ್ನುವ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿತ್ತು.ವಿಶ್ವಕಪ್ ನಿಯಮಗಳು ಕೂಡಾ ತಂಡಕ್ಕೆ ಪೂರಕವಾದವು ಎಂದು ಧೋನಿ ತಿಳಿಸಿದ್ದಾರೆ.

ಭಾರತ ತಂಡ ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಕಾರಣವೇನು? ಎನ್ನುವ ಪ್ರಶ್ನೆಗೆ ಉತ್ತರಿಸಿದ ಧೋನಿ, ನಾನು ತುಂಬಾ ಅದೃಷ್ಟಶಾಲಿ ನಾಯಕ ಎಂದರು ಮುಗುಳ್ನಗುತ್ತಾ.

ವೆಬ್ದುನಿಯಾವನ್ನು ಓದಿ