ಧೋನಿ ತುಂಬಾ ಬುದ್ದಿವಂತ ನಾಯಕ:ಸಂಗಕ್ಕಾರ

ಭಾನುವಾರ, 3 ಏಪ್ರಿಲ್ 2011 (11:11 IST)
PTI
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ನಂತರ ಮಾತನಾಡಿದ ಲಂಕಾ ನಾಯಕ ಸಂಗಕ್ಕಾರ, 300 ರನ್‌ಗಳ ಸವಾಲೊಡ್ಡಿದ್ದರು ಭಾರತದ ಬಲಾಢ್ಯ ಬ್ಯಾಟಿಂಗ್ ಶಕ್ತಿ ಗೆಲುವಿನ ಗುರಿ ತಲುಪುತ್ತಿತ್ತು ಎಂದು ಹೇಳಿದ್ದಾರೆ.

ಭಾರತದ ಬ್ಯಾಟಿಂಗ್ ಬಲ ತುಂಬಾ ಪ್ರಬಲವಾಗಿದ್ದರಿಂದ, 300 ರನ್‌ಗಳ ಸವಾಲು ಕೂಡಾ ತುಂಬಾ ಕಡಿಮೆಯಾಗುತ್ತಿತ್ತು. ಬ್ಯಾಟಿಂಗ್ ಬಲ ತುಂಬಾ ಶಕ್ತಿಶಾಲಿಯಾಗಿದ್ದು, ಏಕದಿನ ಪಂದ್ಯಕ್ಕೆ ಸೂಕ್ತವಾಗಿದೆ. ತಂಡದ ನಾಯಕ ಧೋನಿ ತುಂಬಾ ಬುದ್ದಿವಂತ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಎಡಗೈ ಬ್ಯಾಟ್ಸ್‌ಮೆನ್‌ಗಳಲ್ಲಿ ಗಂಭೀರ್ ಅತ್ಯುತ್ತಮ ಬ್ಯಾಟ್ಸ್‌ಮೆನ್. ವಿರಾಟ್ ಅವರೊಂದಿಗೆ ಜೊತೆಯಾಟ ಅದ್ಭುತವಾಗಿತ್ತು ಎಂದರು.

ಸೆಹ್ವಾಗ್ ಮತ್ತು ಸಚಿನ್ ವಿಕೆಟ್ ಪತನದ ನಂತರ, ಲಂಕಾ ತಂಡದ ಆಟಗಾರರು ಗೆಲ್ಲುವ ಕೆಲ ಅವಕಾಶಗಳನ್ನು ಕಳೆದುಕೊಂಡರು ಎಂದು ಸಂಗಕ್ಕಾರ ತಿಳಿಸಿದ್ದಾರೆ.

ವಾಂಖೇಡೆ ಕ್ರೀಡಾಂಗಣದ ಪಿಚ್ ಉತ್ತಮವಾಗಿದೆ. ಇನಿಂಗ್ಸ್‌ನ ಮಧ್ಯಭಾಗದಲ್ಲಿ ಸ್ವಲ್ಪ ತಿರುವು ನೀಡಿತ್ತು. ಅದಕ್ಕಾಗಿ ಹೆಚ್ಚಿನ ಆತಂಕಪಡಲಿಲ್ಲ. ಮುರಳಿಧರನ್ ಅತ್ಯುತ್ತಮವಾಗಿ ಸ್ಪಿನ್ ಬೌಲಿಂಗ್ ಮಾಡಬಲ್ಲರು ಎನ್ನುವ ವಿಶ್ವಾಸವಿತ್ತು ಎಂದು ವಿವರಣೆ ನೀಡಿದ್ದಾರೆ.

ಪಂದ್ಯದ 18ನೇ ಮತ್ತು 19 ನೇ ಓವರ್‌ನಲ್ಲಿ ಭಾರತ ತಂಡ 100 ರನ್‌ಗಳ ಗಡಿಯನ್ನು ದಾಟಿದ್ದಾಗ, ಕಡಿವಾಣ ಹಾಕಲು ಪ್ರಯತ್ನಿಸಿದೆವು. ಆದರೆ, ಸಾಧ್ಯವಾಗದೆ ಪರಿಸ್ಥಿತಿ ಕೈ ಮೀರಿತು ಎಂದು ಕುಮಾರ ಸಂಗಕ್ಕಾರ ನುಡಿದರು.

ವೆಬ್ದುನಿಯಾವನ್ನು ಓದಿ