ಭಾರತೀಯ ತಂಡಕ್ಕೆ ನೀಡಿದ್ದ ವಿಶ್ವಕಪ್ ಟ್ರೋಫಿ ನಕಲಿ?

ಸೋಮವಾರ, 4 ಏಪ್ರಿಲ್ 2011 (13:33 IST)
PTI
28 ವರ್ಷಗಳ ನಂತರ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ್ದ ಟೀಮ್ ಇಂಡಿಯಾ ಸಹಿತ ಕೋಟ್ಯಂತರ ಅಭಿಮಾನಿಗಳು ಮೋಸ ಹೋಗಿದ್ದಾರೆ. ಮೂಲಗಳ ಪ್ರಕಾರ ಟೀಮ್ ಇಂಡಿಯಾಕ್ಕೆ ನೀಡಲಾಗಿದ್ದ ವಿಶ್ವಕಪ್ ಟ್ರೋಫಿ ನಕಲಿಯಾಗಿತ್ತು.

ಹಾಗಾದರೆ ಅಸಲಿ ಟ್ರೋಫಿ ಎಲ್ಲಿ?
ಕಸ್ಟಮ್ಸ್ ಅಧಿಕಾರಿಗಳ ಬಳಿ ಅಸಲಿ ಟ್ರೋಫಿ ಇದೆ ಬಿಸಿಸಿಐ ಮೂಲಗಳಿಂದ ವರದಿಯಾಗಿದೆ. ಹಾಗೆಯೇ ಅಸಲಿ ಟ್ರೋಫಿ ತಮ್ಮ ಬಳಿ ಇದೆ ಎಂಬುದನ್ನು ಮುಂಬೈ ಕಸ್ಟಮ್ಸ್ ಅಧಿಕಾರಿಗಳ ಸ್ಪಷ್ಟನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಭಾರತ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಐಸಿಸಿ ಅಧ್ಯಕ್ಷರು ನೀಡಿದ್ದ ಟ್ರೋಫಿಯು ನಕಲಿಯಾಗಿತ್ತು. ಟ್ರೋಫಿಯನ್ನು ಕೊಲಂಬೊದಿಂದ ಭಾರತಕ್ಕೆ ತರುವ ವೇಳೆಯಲ್ಲಿ 15 ಲಕ್ಷ ತೆರಿಗೆ ಪಾವತಿಸಲು ಐಸಿಸಿ ನಿರಾಕರಿಸಿದ್ದರ ಹಿನ್ನಲೆಯಲ್ಲಿ ಟ್ರೋಫಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಭಾರತ ಎತ್ತಿ ಹಿಡಿದ ಟ್ರೋಫಿನಲ್ಲಿ ಯಾವುದೇ ಐಸಿಸಿ ಲೋಗೋ ಕಂಡುಬಂದಿಲ್ಲ. ಇದು ಕೂಡಾ ಟ್ರೋಫಿ ನಕಲಿ ಎಂಬುದಕ್ಕೆ ಸಾಕ್ಷ್ಮವಾಗಿದೆ.

ಮೋಸ ಹೋದ ಟೀಮಾ ಇಂಡಿಯಾ?
ಹಾಗೇನಿದ್ದರೆ ಟೀಮ್ ಇಂಡಿಯಾ ಇಷ್ಟು ವರೆಗೆ ಹೆಮ್ಮೆಪಟ್ಟಿದ್ದು, ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಸಂಭ್ರಮದಿಂದ ಕಿಸ್ ಕೊಟ್ಟಿದ್ದು ನಕಲಿ ಟ್ರೋಫಿಗೇನಾ..? ಇದಕ್ಕೆ ಐಸಿಸಿ ಅಧಿಕಾರಿಗಳೇ ಉತ್ತರಿಸಬೇಕು.

ವೆಬ್ದುನಿಯಾವನ್ನು ಓದಿ