ಸದ್ದಿಲ್ಲದೆ ಮತ್ತೊಂದು ದಾಖಲೆ ಬರೆದ ಜಾಕ್ವಾಸ್ ಕಾಲಿಸ್

ಶುಕ್ರವಾರ, 18 ನವೆಂಬರ್ 2011 (17:16 IST)
PTI
ರನ್ನುಗಳ ಸರದಾರ ಭಾರತದ ಸಚಿನ್ ತೆಂಡೂಲ್ಕರ್ ಅವರ ಪ್ರತಿಯೊಂದು ದಾಖಲೆಗೂ ಭಾರಿ ಪ್ರಚಾರ ಸಿಗುತ್ತಲೇ ಇವೆ. 100ನೇ ಶತಕದ ಹೊಸ್ತಿಲಲ್ಲಿರುವ ಸಚಿನ್ ಶತಕಗಳ ಶತಕದ ಐತಿಹಾಸಿಕ ಸಾಧನೆಯನ್ನು ಯಾವಾಗ ತಲುಪಲಿದ್ದಾರೆ ಎಂಬುದೇ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆದರೆ ಅತ್ತ ದಕ್ಷಿಣ ಆಫ್ರಿಕಾದ ಹಿರಿಯ ಆಲರೌಂಡರ್ ಜಾಕ್ವಾಸ್ ಕಾಲಿಸ್ ಯಾವುದೇ ಸದ್ದಿಲ್ಲದೆ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿರುವ ಈ ಕಲಾತ್ಮಕ ಬ್ಯಾಟ್ಸ್‌ಮನ್, ಟೆಸ್ಟ್‌ ಕ್ರಿಕೆಟ್‌ನಲ್ಲಿ 12 ಸಾವಿರ ರನ್ನುಗಳ ಸಾಧನೆ ಮಾಡಿದ್ದಾರೆ.

ವೆಸ್ಟ್‌ಇಂಡೀಸ್ ಮಾಜಿ ಬ್ಯಾಟಿಂಗ್ ದಂತಕಥೆ ಬ್ರ್ಯಾನ್ ಲಾರಾ ಅವರನ್ನು ಹಿಂದಕ್ಕೆ ತಳ್ಳಿರುವ ಕಾಲಿಸ್ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಈ ಪೈಕಿ ಅಗ್ರ ಎರಡು ಸ್ಥಾನಗಳನ್ನು ಭಾರತದ ಸಚಿನ್ ತೆಂಡೂಲ್ಕರ್ (15,086) ಮತ್ತು ರಾಹುಲ್ ದ್ರಾವಿಡ್ (12,979) ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ (12,495) ಮೂರನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಆಗಾಧ ಕೊಡುಗೆ ನೀಡಿರುವ ಕಾಲಿಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 270 ವಿಕೆಟುಗಳನ್ನು ಕಬಳಿಸಿದ್ದಾರೆ. ಆ ಮೂಲಕ ವಿಶ್ವಶ್ರೇಷ್ಠ ಆಲರೌಂಡರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ