ಯುವ ಕ್ರಿಕೆಟಿಗರನ್ನು ಚಾಪೆಲ್ ಪ್ರೋತ್ಸಾಹಿಸಿದ್ದರು: ಸುರೇಶ್ ರೈನಾ

ಶನಿವಾರ, 19 ನವೆಂಬರ್ 2011 (14:47 IST)
PTI


ತಮ್ಮ ಅಧಿಕಾರದ ಅವಧಿಯಲ್ಲಿ ತಂಡವನ್ನು ಒಡೆಯುವ ಪ್ರಯತ್ನಕ್ಕೆ ಮುಂದಾಗಿದ್ದ ಹಾಗೂ ಹಿರಿಯ ಕ್ರಿಕೆಟಿಗರೊಂದಿಗೆ ಭಿನ್ನಭಿಪ್ರಾಯ ಹೊಂದಿದ್ದ ಭಾರತದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಬಗ್ಗೆ ಉದಯೋನ್ಮುಖ ಆಟಗಾರ ಸುರೇಶ್ ರೈನಾ ಮಾತ್ರ ಕೆಲವೊಂದು ಒಳ್ಳೆಯ ಮಾತುಗಳನ್ನಾಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಾಜಿ ನಾಯಕ ಸೌರವ್ ಗಂಗೂಲಿ ಜತೆಗಿನ ಭಿನ್ನಪ್ರಾಯದಿಂದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಚಾಪೆಲ್ ಕೊನೆಗೂ ತಮ್ಮ ಕೋಚ್ ಸ್ಥಾನ ಬಿಟ್ಟುಕೊಡಬೇಕಾಯಿತು. ಆದರೆ ಯುವ ಕ್ರಿಕೆಟಿಗರನಂತೂ ಚಾಪೆಲ್ ಪ್ರೋತ್ಸಾಹಿಸಿದ್ದರು ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ತಂಡದಲ್ಲಿ ಯುವ ಕ್ರಿಕೆಟಿಗರಿಗೆ ತಕ್ಕ ಸಂಭಾವನೆಯಾಗುತ್ತಿದೆ ಎಂಬುದನ್ನು ಚಾಪೆಲ್ ಖಾತ್ರಿಪಡಿಸಿದರು. ಇದರಿಂದಾಗಿ ಮಹೇಂದ್ರ ಸಿಂಗ್ ಧೋನಿ, ಆರ್. ಪಿ. ಸಿಂಗ್, ಮುರಳಿ ಕಾರ್ತಿಕ್ ಸೇರಿದಂತೆ ಇತರ ಅನೇಕ ಆಟಗಾರರು ದೇಶದ ಪರ ಆಡುವಂತಾಗಿತ್ತು ಎಂದು ರೈನಾ ವಿವರಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

PTI


ದ್ರಾವಿಡ್‌ಗೂ ಸಲಾಂ...
ಇದೇ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಬಗ್ಗೆಯೂ ಪ್ರಶಂಸೆಯ ಮಾತುಗಳನ್ನಾಡಿರುವ ಈ ಉತ್ತರ ಪ್ರದೇಶ ಆಲ್‌ರೌಂಡರ್, ದ್ರಾವಿಡ್ ತನಗೆ ಪ್ರೇರಣೆಯಾಗಿದ್ದಾರೆ ಎಂದಿದ್ದಾರೆ.

ದ್ರಾವಿಡ್ ಓರ್ವ ಸಭ್ಯ ಹಾಗೂ ಗಮನ ಕೇಂದ್ರಿತ ಆಟಗಾರ. ಅವರು ಹಗುರವಾಗಿ ಮಾತನಾಡಿದ್ದನ್ನು ಕೇಳಲು ಸಾಧ್ಯವೇ ಇಲ್ಲ. ನನ್ನ ಸಾಮರ್ಥ್ಯದ ಮೇಲೆ ನಂಬಿಕೆಯನ್ನಿರಿಸಿದ ಅವರಿಗೆ ನಾನು ಬದ್ಧನಾಗಿರುತ್ತೇನೆ ಎಂದು ದ್ರಾವಿಡ್ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ 2005ರಲ್ಲಿ ಅಂತರಾಷ್ಟ್ರೀಯ ಏಕದಿನ ಕೆರಿಯರ್‌ಗೆ ಪದಾರ್ಪಣೆ ಮಾಡಿದ್ದ ದ್ರಾವಿಡ್ ತಿಳಿಸಿದರು.

ಏಕದಿನದಲ್ಲಿ ಎದುರಿಸಿದ ಮುರಳೀಧರನ್ ಅವರ ಮೊದಲ ಎಸೆತದಲ್ಲೇ ನಾನು ಕ್ಲೀನ್ ಬೌಲ್ಡ್ ಆದೆ. ಆದರೆ ಸಂಜೆಯ ಹೊತ್ತಿಗೆ ನನ್ನ ಬಳಿಗೆ ಬಂದ ದ್ರಾವಿಡ್, ರಿಲಾಕ್ಸ್ ಆಗಿರು ಇನ್ನೂ ಸಾಕಷ್ಟು ದೂರ ಕ್ರಮಿಕರಿಸಬೇಕಾಗಿದೆ ಎಂದು ಆಶ್ವಾಸನೆ ಮಾಡಿರುವುದಾಗಿ ರೈನಾ ನೆನಪಿಸಿಕೊಂಡರು.

PTI


ತಾನೀಗ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಕೆಲಸ ಮಾಡುತ್ತಿರುವುದಾಗಿ ತಿಳಿಸಿರುವ ರೈನಾ, ಉತ್ತಮ ನಿರ್ವಹಣೆ ಕುರಿತು ಗಮನ ವಹಿಸಿರುವುದೇ ಇಷ್ಟರ ತನಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿದೆ ಎಂದರು.

100ನೇ ಶತಕದ ಹೊಸ್ತಿಲಲ್ಲಿರುವ ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡಿದ ಅವರು, ಇತರರ ಯಶಸ್ಸನ್ನು ಸಹಆನಂದಿಸುತ್ತಿರುವುದು ಸಚಿನ್‌ರನ್ನು ಇತರರಿಗಿಂತ ಹೆಚ್ಚು ವಿಶೇಷವನ್ನಾಗಿಸುತ್ತದೆ ಎಂದರು.

ವೆಬ್ದುನಿಯಾವನ್ನು ಓದಿ