ಮುಂಬೈನಲ್ಲಿ 100ನೇ ಶತಕ ಬಾರಿಸಿದಲ್ಲಿ ಸಚಿನ್ ಕೈಸೇರಲಿದೆ 100 ಚಿನ್ನದ ನಾಣ್ಯಗಳು!

ಶನಿವಾರ, 19 ನವೆಂಬರ್ 2011 (18:10 IST)
ಸದ್ಯ ಇಡೀ ದೇಶದ ಕ್ರೀಡಾಭಿಮಾನಿಗಳು ಸಚಿನ್ ತೆಂಡೂಲ್ಕರ್ ಅವರ 100ನೇ ಶತಕ ಸಾಧನೆಯು ಇಂದಲ್ಲ ನಾಳೆ ದಾಖಲಾಗಲಿದೆ ಎಂಬ ನಿರೀಕ್ಷೆಯಿಂದ ಸುಸ್ತಾಗಿ ಬಿಟ್ಟಿದ್ದಾರೆ. ಅತ್ತ ಸಚಿನ್ ಮಾತ್ರ ಇದು ಕೇವಲ ಅಂಕಿ ಮಾತ್ರ ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಣ್ಣಾಗಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮತ್ತೊಂದೆಡೆ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅದೇ ನಿಲುವನ್ನು ಸ್ವೀಕರಿಸಿರುವ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಸಹ, ನವೆಂಬರ್ 22ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಆರಂಭವಾಗಲಿರುವ ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಲಿಟ್ಲ್ ಮಾಸ್ಟರ್ ನೂರನೇ ಶತಕದ ಸಾಧನೆ ಮಾಡಿದಲ್ಲಿ, 100 ಚಿನ್ನದ ನಾಣ್ಯ ನೀಡಿ ಸನ್ಮಾನಿಸಲಿದ್ದೇವೆ ಎಂದು ಘೋಷಿಸಿದೆ.

ಕೊಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯ ಸಂದರ್ಭದಲ್ಲೂ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಇಂತಹದೊಂದು ಘೋಷಣೆಯನ್ನು ಹೊರಡಿಸಿತ್ತು. ಆದರೆ ಭಾರತ ಇನ್ನಿಂಗ್ಸ್ ಅಂತರದಿಂದ ಗೆದ್ದುಕೊಂಡಿದ್ದ ಕೊಲ್ಕತಾ ಪಂದ್ಯದಲ್ಲಿ ಶತಕ ಸಾಧನೆ ಮಾಡುವಲ್ಲಿ ಸಚಿನ್ ವಿಫಲರಾಗಿದ್ದರು.

ಸಚಿನ್ ತಮ್ಮ ಕೊನೆಯ ಅಂತರಾಷ್ಟ್ರೀಯ ಶತಕವನ್ನು ಕಳೆದ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲಿಸಿದ್ದರು. ಮಾರ್ಚ್ 12ರಂದು ನಾಗ್ಪುರದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ 99ನೇ ಶತಕ ಸಾಧನೆ ಮಾಡಿದ ಸಚಿನ್ ಅವರ 100ನೇ ಶತಕದ ಕನಸು ಇನ್ನೂ ಈಡೇರಿಲ್ಲ. ಹೀಗಾಗಿ ಸಚಿನ್ ಆಡುತ್ತಿರುವ ಪ್ರತಿಯೊಂದು ಇನ್ನಿಂಗ್ಸ್ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ