ಐಪಿಎಲ್: ಆರ್‌ಸಿಬಿಯೊಂದಿಗೆ ಕ್ರಿಸ್ ಗೇಲ್ ಒಪ್ಪಂದ

ಶುಕ್ರವಾರ, 20 ಜನವರಿ 2012 (16:07 IST)
PTI
ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ಎರಡು ಆವೃತ್ತಿಯ ಪಂದ್ಯಾವಳಿಗೆ ವೆಸ್ಟ್‌ಇಂಡೀಸ್ ಮೂಲದ ಸ್ಫೋಟಕ ಬ್ಯಾಟ್ಸ್‌ಮೆನ್ ಕ್ರಿಸ್ ಗೇಲ್ ಆರ್‌ಸಿಬಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ 2011ರಲ್ಲಿ ಆಸ್ಟ್ರೇಲಿಯಾದ ಡಿರ್ಕ್ ನಾನ್ನೆಸ್ ಬದಲಿಗೆ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.

ಕ್ರಿಸ್ ಗೇಲ್ ಆರಂಭದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರವಾಡಿದ್ದರೂ ನಂತರ ಆರ್‌ಸಿಬಿಯೊಂದಿಗೆ ಒಪ್ಪಂದ ಮಾಡಿಕೊಂಡು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ 'ಆರೇಂಜ್ ಕ್ಯಾಪ್' ಬಹುಮಾನ ಪಡೆದಿದ್ದರು. ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಪಂದ್ಯವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಸ್ಫೋಟಕ ಬ್ಯಾಟ್ಸ್‌ಮೆನ್ ಕ್ರಿಸ್ ಗೇಲ್ ಐಪಿಎಲ್ ಪಂದ್ಯಾವಳಿಗಾಗಿ ಆರ್‌ಸಿಬಿ ತಂಡದ ಶಾಶ್ವತ ಸದಸ್ಯರಾಗಿರುವುದು ಸಂತೋಷ ತಂದಿದೆ. ಗೇಲ್ ನೆರವಿನಿಂದ ಫೈನಲ್ ಹಂತದವರೆಗೆ ತಲುಪಲು ಸಾಧ್ಯವಾಗಿತ್ತು ಎಂದು ರಾಯಲ್ ಚಾಲೆಂಜರ್ಸ್ ಸ್ಫೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸಿದ್ಧಾರ್ಥ ಮಲ್ಯ ತಿಳಿಸಿದ್ದಾರೆ.

ಗೇಲ್‌ರಂತಹ ಆಟಗಾರರು ತಂಡದಲ್ಲಿರುವಾಗ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಐಪಿಎಲ್ ಕಪ್ ಗೆಲ್ಲಲು ಮತ್ತಷ್ಟು ತಂತ್ರಗಳನ್ನು ರೂಪಿಸಲಾಗುವುದು ಎಂದು ಮಲ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ