ಮುಂಬರುವ ಹರಾಜಿನಲ್ಲಿ ಲಕ್ಷ್ಮಣ್ ಫ್ರಾಂಚೈಸಿ ಗಿಟ್ಟಿಸುವುದು ಕಷ್ಟ

ಮಂಗಳವಾರ, 24 ಜನವರಿ 2012 (11:14 IST)
WD
ಕಳಪೆ ಪ್ರದರ್ಶನದಿಂದಾಗಿ ಈಗಾಗಲೇ ತೀವ್ರ ಒತ್ತಡವನ್ನು ಎದುರಿಸುತ್ತಿರುವ ಹಿರಿಯ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಐದನೇ ಆವೃತ್ತಿಗಾಗಿನ ಹರಾಜಿನಲ್ಲಿ ಫ್ರಾಂಚೈಸಿ ಗಿಟ್ಟಿಸಿಕೊಳ್ಳುವುದು ಅತ್ಯಂತ ಕಷ್ಟವೆನಿಸಿದೆ.

ಐಪಿಎಲ್ ಮೊದಲ ಮೂರು ಆವೃತ್ತಿಗಳಲ್ಲಿ ತಾಯ್ನಾಡಿನ ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ಲಕ್ಷ್ಮಣ್ ಅವರನ್ನು ಕಳೆದ ಆವೃತ್ತಿಯಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡವು ಖರೀದಿಸಿತ್ತು. ಆದರೆ ಮುಂದಿನ ಲೀಗ್‌ನಿಂದ ಕೊಚ್ಚಿ ತಂಡವನ್ನು ವಜಾ ಮಾಡಿರುವ ಹಿನ್ನಲೆಯಲ್ಲಿ ಆಟಗಾರರು ಮತ್ತೆ ಹರಾಜಿಗೆ ಲಭ್ಯವಾಗಿದ್ದಾರೆ.

ಆದರೆ ಟ್ವೆಂಟಿ-20 ಪ್ರಕಾರದ ಆಟಕ್ಕೆ ಟೆಸ್ಟ್ ಸ್ಪೆಷಲಿಸ್ಟ್ ಲಕ್ಷ್ಮಣ್‌ ಹೊಂದಿಕೊಳ್ಳುವರೇ ಅಥವಾ ಪೂರ್ಣ ಪ್ರಮಾಣದ ಆಟಕ್ಕೆ ಲಭ್ಯವಾಗುವರೇ ಎಂಬ ಆಂತಕ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲ ಒಂಬತ್ತು ಫ್ರಾಂಚೈಸಿಗಳಲ್ಲಿ ಕಾಡುತ್ತಿವೆ. ಹಾಗಾಗಿ ಲಕ್ಷ್ಮಣ್ ಖರೀದಿಸುವಲ್ಲಿ ಫ್ರಾಂಚೈಸಿಗಳು ಮುಂದಾಗುವರೇ ಅಥವಾ ಕಡಿಮೆ ಮೊತ್ತಕ್ಕೆ ಮಾರಾಟವಾಗಲಿದ್ದಾರೆಯೇ ಎಂಬುದು ಕುತೂಹಲವೆನಿಸಿದೆ.

ಲಕ್ಷ್ಮಣ್ ಸಹಿತ ಕೊಚ್ಚಿ ತಂಡದಲ್ಲಿದ್ದ ರವೀಂದ್ರ ಜಡೇಜಾ, ಪಾರ್ಥಿವ್ ಪಟೇಲ್, ರುದ್ರ ಪ್ರತಾಪ್ ಸಿಂಗ್, ಬ್ರೆಂಡನ್ ಮೆಕಲಮ್, ಮಹೇಲಾ ಜಯವರ್ಧನೆ ಮತ್ತು ಮುತ್ತಯ್ಯ ಮುರಳೀಧರನ್ ಸಹ ಹರಾಜಿಗೆ ಲಭ್ಯವಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ