ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಹರಾಜು

ಶನಿವಾರ, 4 ಫೆಬ್ರವರಿ 2012 (12:11 IST)
WD


ಇಂಡಿಯನ್ ಪ್ರೀಮಿಯರ್ ಲೀಗ್ ಐದನೇ ಆವೃತ್ತಿಗಾಗಿನ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ನಿರೀಕ್ಷೆಯಂತೆಯೇ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ.

ಅಂತಿಮವಾಗಿ ಟ್ರೈ-ಬ್ರೇಕರ್‌ನಲ್ಲಿ ರವೀಂದ್ರ ಜಡೇಜಾ ಅವರನ್ನು 9.7 ಕೋಟಿ ರೂಪಾಯಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿದೆ. ಕಳೆದ ಬಾರಿ ಕೊಚ್ಚಿ ಟಸ್ಕರ್ಸ್ ಕೇರಳ ಪರ ಆಡಿದ್ದ ಜಡೇಜಾ ಮೂಲಧನ 46 ಲಕ್ಷ ರೂಪಾಯಿಗಳಾಗಿತ್ತು.

ಅದೇ ರೀತಿ ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್ ಅವರನ್ನು ಶಾರೂಕ್ ಖಾನ್ ಮಾಲಿಕತ್ವದ ಕೊಲ್ಕತಾ ನೈಟ್ ರೈಡರ್ಸ್ 4.14 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಇದರೊಂದಿಗೆ ಮೊದಲ ಮೂರು ಆವೃತ್ತಿಗಳಲ್ಲಿ ಕೊಲ್ಕತಾ ಪರ ಆಡಿದ್ದ ಮೆಕಲಮ್ ಮತ್ತೆ ಮೂಲ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ