ಭಾರತದ ವಿರುದ್ಧದ ಟ್ವೆಂಟಿ-20 ಪಂದ್ಯಕ್ಕೆ ಕಾಲಿಸ್ ಲಭ್ಯ

ಗುರುವಾರ, 29 ಮಾರ್ಚ್ 2012 (14:02 IST)
PTI
ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಜಾಕ್ವಾಸ್ ಕಾಲಿಸ್ ಅವರು ದೇಶದ ಕ್ರಿಕೆಟ್‌ಗೆ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ಈ ಚಾಂಪಿಯನ್ ಆಟಗಾರನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭಾರತ ವಿರುದ್ಧ ಏಕೈಕ ಟ್ವೆಂಟಿ-20 ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು.

ಆದರೆ ಕುತ್ತಿಗೆ ನೋವಿಗೆ ಸಿಲುಕಿದ್ದ ಕಾಲಿಸ್ ಈ ಪಂದ್ಯಕ್ಕೆ ಲಭ್ಯರಾಗುವರೇ ಎಂಬುದು ಅನುಮಾನಕ್ಕೆ ಕಾರಣವಾಗಿತ್ತು. ಈ ನಡುವೆ ಹೇಳಿಕೆ ಕೊಟ್ಟಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವ್ಯವಸ್ಥಾಪಕ ಮೊಹಮ್ಮದ್ ಮೂಸಾಂಜಿ, ಹಿರಿಯ ಅನುಭವಿ ಆಟಗಾರ ಕಾಲಿಸ್ ಪಂದ್ಯಕ್ಕೆ ಲಭ್ಯರಿರುತ್ತಾರೆ ಎಂದು ಖಚಿತಪಡಿಸಿದ್ದಾರೆ.

ಕುತ್ತಿಗೆ ನೋವಿನಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಾಲಿಸ್ ಭಾಗವಹಿಸಿರಲಿಲ್ಲ. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ