ಐಪಿಎಲ್ 2009ರಲ್ಲಿದು ಸೆಹ್ವಾಗ್ ಮೊದಲ ಅರ್ಧಶತಕ..!

ಶುಕ್ರವಾರ, 22 ಮೇ 2009 (10:26 IST)
ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಗುರುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 55ನೇ ಪಂದ್ಯದಲ್ಲಿ ದಾಖಲಾದ ಕೆಲವು ಅಂಕಿ ಅಂಶಗಳ ಪಟ್ಟಿಯಿದು.

- ಮುಂಬೈ ಇಂಡಿಯನ್ಸ್ ಪರ ಅತೀ ಹೆಚ್ಚು ರನ್ ಗಳಿಸಿದ ಕೀರ್ತಿ ಜೀನ್ ಪೌಲ್ ಡ್ಯುಮಿನಿಯವರದ್ದು. ಅವರು 41.33ರ ಸರಾಸರಿಯಲ್ಲಿ 13 ಪಂದ್ಯಗಳಿದ 372 ರನ್ ದಾಖಲಿಸಿದ್ದಾರೆ.

- ಸನತ್ ಜಯಸೂರ್ಯ ಐಪಿಲ್‌ನಲ್ಲಿ ತನ್ನ ಎರಡನೇ ಶೂನ್ಯ ದಾಖಲಿಸಿದರು. ಅವರು ಐಪಿಎಲ್ 2009ರಲ್ಲಿ 12 ಪಂದ್ಯಗಳಿಂದ 18.41ರ ಸರಾಸರಿಯಲ್ಲಿ ಎರಡು ಅರ್ಧಶತಕಗಳ ಸಹಿತ 221 ರನ್ ಮಾಡಿದ್ದಾರೆ.

- ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಡೆಲ್ಲಿ ಡೇರ್‌ಡೆವಿಲ್ಸ್ ಸಚಿನ್ ಪಾಳಯದ ವಿರುದ್ಧ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಸತತವಾಗಿ ಗೆದ್ದುಕೊಂಡಂತಾಗಿದೆ.

- ಐಪಿಎಲ್ 2009ರಲ್ಲಿ 10 ಪಂದ್ಯಗಳನ್ನು ಜಯಿಸಿದ ಮೊದಲ ತಂಡ ಡೆಲ್ಲಿ ಡೇರ್‌ಡೆವಿಲ್ಸ್ ಎಂಬ ಕೀರ್ತಿಗೆ ಪಾತ್ರವಾಗಿದೆ.

- ಗೌತಮ್ ಗಂಭೀರ್ 38 ಎಸೆತಗಳಿಂದ 47 ರನ್ ದಾಖಲಿಸುವ ಮೂಲಕ ಐಪಿಎಲ್‌ನಲ್ಲಿ 800 ರನ್ ಗಳಿಸಿದ ಮೂರನೇ ಆಟಗಾರ ಎಂದೆನಿಸಿಕೊಂಡಿದ್ದಾರೆ. ಅವರ ಖಾತೆಯಲ್ಲೀಗ 28 ಪಂದ್ಯಗಳಿಂದ ಆರು ಅರ್ಧಶತಗಳ ಸಹಿತ 32.80ರ ಸರಾಸರಿಯಲ್ಲಿ 820 ರನ್‌ಗಳಿವೆ. ಸುರೇಶ್ ರೈನಾ (835) ಮತ್ತು ಆಡಮ್ ಗಿಲ್‌ಕ್ರಿಸ್ಟ್ (831) ಮೊದಲೆರಡು ಸ್ಥಾನ ಪಡೆದಿರುವವರು.

- ಸೆಹ್ವಾಗ್ ಈ ಪಂದ್ಯದ ಮೂಲಕ 2009ರ ಐಪಿಎಲ್‌ನಲ್ಲಿ ಮೊದಲನೇ ಹಾಗೂ ಒಟ್ಟಾರೆ ಐಪಿಎಲ್‌ನಲ್ಲಿ ಮೂರನೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

- ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಸೆಹ್ವಾಗ್ ದಾಖಲಿಸಿದ ಮೊದಲ ಅರ್ಧಶತಕ (50) ಮತ್ತು ಗರಿಷ್ಠ ಮೊತ್ತವೂ ಹೌದು. ಕೇಪ್‌ಟೌನ್‌ನಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ 16 ಎಸೆತಗಳಿಂದ 38 ರನ್ ಮಾಡಿದ್ದು ಈ ವರ್ಷದ ಇದುವರೆಗಿನ ಹೆಚ್ಚಿನ ಮೊತ್ತವಾಗಿತ್ತು.

- ಗಂಭೀರ್ ಮತ್ತು ಸೆಹ್ವಾಗ್ ಮುಂಬೈ ಇಂಡಿಯನ್ಸ್ ವಿರುದ್ಧ 68 ರನ್‌ಗಳ ಜತೆಯಾಟ ನೀಡುವ ಮೂಲಕ ಕಳೆದ ವರ್ಷ ಗಂಭೀರ್ ಮತ್ತು ಶಿಖರ್ ಧವನ್ ದೆಹಲಿಯಲ್ಲಿ 30 ರನ್‌ಗಳ ಪಾಲುದಾರಿಕೆ ನೀಡಿದ್ದನ್ನು ಮೀರಿಸಿ ನಿಂತರು.

- ಅಜಿಂಕ್ಯಾ ರಹಾನೆ 41 ಎಸೆತಗಳಿಂದ 56 ರನ್ ಮಾಡುವ ಮೂಲಕ ಐಪಿಎಲ್‌ನಲ್ಲಿ ಎರಡನೇ ಅರ್ಧಶತಕ ದಾಖಲಿಸಿದ್ದಾರೆ. ಅವರ ಗರಿಷ್ಠ ಗಳಿಕೆ ಬೆಂಗಳೂರು ವಿರುದ್ಧ ಪೋರ್ಟ್ ಎಲಿಜಬೆತ್‌ನಲ್ಲಿ 49 ಎಸೆತಗಳಿಂದ 62 ರನ್ ಮಾಡಿದ್ದು.

- ಮುಂಬೈ ಇಂಡಿಯನ್ಸ್ ಪರ ಅತೀ ಹೆಚ್ಚು ವಿಕೆಟ್ ಪಡೆದವರು ಲಸಿತ್ ಮಾಲಿಂಗ. ಅವರು 13 ಪಂದ್ಯಗಳಿಂದ 17.33ರ ರನ್ ಸರಾಸರಿಯಲ್ಲಿ 18 ವಿಕೆಟ್ ಕಿತ್ತಿದ್ದಾರೆ.

- ಹರಭಜನ್ ಸಿಂಗ್ 17ಕ್ಕೆ ನಾಲ್ಕು ವಿಕೆಟ್ ಪಡೆಯುವ ಮೂಲಕ ಐಪಿಎಲ್‌ನಲ್ಲಿ ಮೊದಲ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದರು. ಕಳೆದ ವರ್ಷ ಕಿಂಗ್ಸ್ XI ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ 32ಕ್ಕೆ ಮೂರು ವಿಕೆಟ್‌ ಪಡೆದದ್ದೇ ಶ್ರೇಷ್ಠವಾಗಿತ್ತು.

ವೆಬ್ದುನಿಯಾವನ್ನು ಓದಿ