ಟಿ-20 ವಿಶ್ವಕಪ್ II: ಬ್ರಿಟಿಷರಿಗೆ ಡಚ್ಚರ ಪ್ರಥಮ ಸವಾಲು

ಗುರುವಾರ, 4 ಜೂನ್ 2009 (19:09 IST)
ಟ್ವೆಂಟಿ20 ವಿಶ್ವಕಪ್ ತಂಡಗಳು ಉತ್ಸಾಹದ ಹಮ್ಮಿನಲ್ಲಿವೆ. ಎರಡನೇ ಟ್ವೆಂಟಿ-20 ವಿಶ್ವಕಪ್ ಕೂಟದ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ದುರ್ಬಲ ತಂಡವಾದ ನೆದರ್‌ಲ್ಯಾಂಡ್‌ ತಂಡವನ್ನು ಎದುರಿಸಲಿದ್ದು, ಮಂಗಳವಾರದಂದು ಸ್ಕಾಟ್‌ಲ್ಯಾಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯಗಳಿಸಿರುವ ಇಂಗ್ಲೆಂಡ್ ತಂಡ , ನಾಯಕ ಪೌಲ್ ಕಾಲಿಂಗ್‌‌ವುಡ್ ನೇತೃತ್ವದಲ್ಲಿ ಭಾರಿ ಉತ್ಸಾಹದಲ್ಲಿದೆ.

ತಂಡದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು, ನಾವು ಕಪ್ಪು ಕುದುರೆಗಳಿದ್ದಂತೆ. ಆದ್ದರಿಂದ ತಂಡದ ಆಟಗಾರರು ಉತ್ತಮ ಹೋರಾಟ ನಡೆಸುವ ನಂಬಿಕೆಯಿದೆ ಎಂದು ಕಾಲಿಂಗ್‌ವುಡ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಒಂಬತ್ತು ವಿಕೆಟ್‌ಗಳ ನಿರಂತರ ಏಳನೇ ಬಾರಿಗೆ ಜಯಗಳಿಸಿ ದಾಖಲೆಯನ್ನು ಸೃಷ್ಟಿಸಿದ್ದರಿಂದ ತಂಡದ ನಾಯಕ ಕಾಲಿಂಗ್‌ವುಡ್ ಉತ್ತಮ ಸ್ಪೂರ್ತಿಯಲ್ಲಿದ್ದಾರೆ.

ರವಿ ಬೋಪರಾ, ವೆಸ್ಟ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಲ್ಲಿ ಸತತ ಮೂರು ಶತಕಗಳನ್ನು ಬಾರಿಸಿದ್ದಲ್ಲದೇ ನಿನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ 35 ಎಸೆತಗಳಲ್ಲಿ 60 ರನ್‌ಗಳನ್ನು ಸಿಡಿಸಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ.

ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್, ಸ್ನಾಯು ಸೆಳೆತದಿಂದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಗೈರು ಹಾಜರಾಗಿದ್ದು ಸ್ಕಾಟ್‌ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಉತ್ತಮ ಆಟದ ಪ್ರದರ್ಶನ ತೋರಿದ್ದಾರೆ.

ಈ ಮಧ್ಯೆ, ನೆದರ್‌ಲ್ಯಾಂಡ್ ತಂಡದ ಡಚ್ ಕ್ಯಾಪ್ಟನ್‌ ಜೆರೊನ್ ಸ್ಮಿತ್ಸ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ಮೇಲೆ ಯಾವ ರೀತಿಯ ಒತ್ತಡವಿಲ್ಲ .ಇಂಗ್ಲೆಂಡ್ ತಂಡದ ಮೇಲೆ ಒತ್ತಡವಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ