ಒಲಿಂಪಿಕ್:400ಮೀ.ಸೆಮಿ-ಮನ್‌ದೀಪ್‌ಗೆ ಸೋಲು

ಶನಿವಾರ, 16 ಆಗಸ್ಟ್ 2008 (17:06 IST)
ಭಾರತದ ಬಾಕ್ಸಿಂಗ್ ಪಟುಗಳು ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭರವಸೆ ಸ್ಪರ್ಧೆಯೊಂದಿಗೆ ಮುನ್ನುಗ್ಗುತ್ತಿದ್ದರೆ, ಅಥ್ಲೀಟ್‌ಗಳಾದ ವಿಕಾಸ್ ಗೌಡ ಡಿಸ್ಕಸ್ ಥ್ರೋ ಸ್ಪರ್ಧೆ ಯಲ್ಲಿ ಕಳಪೆ ಪ್ರದರ್ಶನ ತೋರಿದರೆ, ಓಟಗಾರ್ತಿ ಮನ್‌ ದೀಪ್ ಕೌರ್ 400ಮೀಟರ್ ಮಹಿಳಾ ಓಟದ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಮುನ್ನುಗ್ಗುವಲ್ಲಿ ವಿಫಲರಾಗಿದ್ದಾರೆ.

ಮನ್‌ದೀಪ್ ಕೌರ್ ಅವರು ಜೂನ್ ತಿಂಗಳಲ್ಲಿ ಮಧುರೈಯಲ್ಲಿ ನಡೆದ 38ನೇ ರಾಷ್ಟ್ರೀಯ ಇಂಟರ್ ಸ್ಟೇಟ್ ಅಥ್ಲೇಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 51.74ಸೆಕೆಂಡ್ಸ್‌ಗಳಲ್ಲಿ ಓಡುವ ಮೂಲಕ ತಮ್ಮ ಜೀವಿತಾವಧಿಯ ಉತ್ತಮ ಸಾಧನೆಯನ್ನು ಸಾಧಿಸಿದ್ದರು.

ಆದರೆ ಮನ್‌ದೀಪ್ ಮತ್ತೆ ಆ ಪ್ರಗತಿಯನ್ನು ತೋರಿಸಲೇ ಇಲ್ಲ, ಶನಿವಾರ ಒಲಿಂಪಿಕ್ ಕ್ರೀಡಾಕೂಟದಲ್ಲಿ 52.88ಸೆಕೆಂಡ್‌ಗಳಲ್ಲಿ ತಮ್ಮ ಗುರಿಯನ್ನು ತಲುಪುವ ಮೂಲಕ,ಮುಂದಿನ ಪ್ರವೇಶ ಪಡೆಯುವಲ್ಲಿ ವಿಫಲರಾದರು.

ವೆಬ್ದುನಿಯಾವನ್ನು ಓದಿ