ಥಾಯಿ ಓಪನ್: ಸಫಿನ್ ನಿರ್ಗಮನ

ಬುಧವಾರ, 24 ಸೆಪ್ಟಂಬರ್ 2008 (16:08 IST)
ಥೈಲ್ಯಾಂಡ್ ಓಪನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಫಿಲಿಪ್ ಪೆಟ್‌ಝೆಶನರ್ ತಮ್ಮ ಎದುರಾಳಿ ರಷ್ಯಾದ ಆಟಗಾರ ಮರಾಟ್ ಸಫಿನ್ ಅವರನ್ನು 6-4, 7-6 ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತನ್ನು ಪ್ರವೇಶಿಸಿದ್ದಾರೆ.

ಜಾಗತಿಕ ಡಬ್ಲೂಟಿಎ ಶ್ರೇಯಾಂಕಪಟ್ಟಿಯಲ್ಲಿ 131ನೇ ಸ್ಥಾನ ಪಡೆದಿರುವ ಫಿಲಿಫ್ ಥೈಲ್ಯಾಂಡ್ ಓಪನ್ ಪಂದ್ಯಾವಳಿಯಲ್ಲಿ ನಾಲ್ಕನೇ ಬಾರಿಗೆ ಎರಡನೇ ಸುತ್ತನ್ನು ಪ್ರವೇಶಿಸಿದ್ದಾರೆ.

ರಷ್ಯಾದ ಏಳನೇ ಶ್ರೇಯಾಂಕಿತ ಆಟಗಾರ ಸಫಿನ್ 41 ನಿಮಿಷಗಳ ಅವಧಿಯ ಪಂದ್ಯದಲ್ಲಿ 33 ತಪ್ಪುಗಳನ್ನು ಎಸಗಿದ್ದರೇ ಎದುರಾಳಿ ಫಿಲಿಫ್ 13 ತಪ್ಪುಗಳನ್ನು ಎಸಗಿದರು ಎಂದು ಮೂಲಗಳು ತಿಳಿಸಿವೆ.

ನನಗೆ ಉತ್ತಮ ಆಟದ ಪ್ರದರ್ಶನ ನೀಡಲು ಸಾಧ್ಯವಾಗದಿರುವುದು ಸೋಲಿಗೆ ಕಾರಣವಾಯಿತು ಎಂದು ಮರಾಟ್ ಸಫಿನ್ ಪಂದ್ಯಾವಳಿಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ