ಇಂಡಿಯನ್ ವೆಲ್ಸ್: ಶಹಾರ್ ಪೀರ್ 2ನೇ ಸುತ್ತಿಗೆ

ಗುರುವಾರ, 12 ಮಾರ್ಚ್ 2009 (13:11 IST)
ಇಲ್ಲಿ ನಡೆಯುತ್ತಿರುವ ಇಂಡಿಯನ್ ವೆಲ್ಸ್ ಡಬ್ಲ್ಯೂಟಿಎ ಟೂರ್ನಮೆಂಟ್‌ನ ಆರಂಭಿಕ ಸುತ್ತಿನಲ್ಲಿ ಇಸ್ರೇಲ್‌ನ ಶಹಾರ್ ಪೀರ್, ಝೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ, ಫ್ರಾನ್ಸ್‌ನ ವರ್ಜೀನಿ ರಜಾನೋ, ಪೋಲೆಂಡ್‌ನ ಉರ್ಜುವಲಾ ರಾಧ್ವಾಂಸ್ಕಾ ಮುಂತಾದವರು ವಿಜಯಿಗಳಾಗಿದ್ದಾರೆ.

ಇಸ್ರೇಲ್ ಆಟಗಾರ್ತಿ ಶಹಾರ್ ಪೀರ್ ತನ್ನ ಎದುರಾಳಿ ಉಕ್ರೇನ್‌ನ ಕತಾರಿಯನ್ ಬಾಂಡರ್ ಎಂಕೋರನ್ನು 6-2, 6-1ರಿಂದ ಮಣಿಸಿದ್ದಾರೆ. ಕಳೆದ ತಿಂಗಳಿನ ದುಬೈ ಚಾಂಪಿಯನ್‌ಶಿಪ್‌ಗೆ ವಿಸಾ ನಿರಾಕರಿಸಿದ್ದ ಕಾರಣ ಸ್ಪರ್ಧೆಯಿಂದ ವಂಚಿತರಾಗಿದ್ದ ಪೀರ್ ತನ್ನ ಎದುರಾಳಿಯನ್ನು 56 ನಿಮಿಷಗಳ ಹೋರಾಟದಲ್ಲಿ ಪರಾಜಯಗೊಳಿಸಿದರು.

ರಷ್ಯಾದ ಎಕತರಿನಾ ಮಕರೋವಾ ತನ್ನ ಎದುರಾಳಿ ಫ್ರಾನ್ಸ್‌ನ ನಥಾಲಿಯೆ ಡೀಚೆಯವರನ್ನು 3-6, 6-1, 6-3ರಿಂದ, ಬಲ್ಗೇರಿಯಾದ ಸ್ವೆಟಾನಾ ಪಿರಂಕೋವಾ ನ್ಯೂಜಿಲೆಂಡ್‌ನ ಮರೀನಾ ಎರಕೊವಿಕ್‌ರನ್ನು 6-4, 6-1ರಿಂದ, ಬೆಲೂರಾಸ್‌ನ ಓಲ್ಗಾ ಗೊವೊರ್ತ್ಸೋವಾ ಇಂಗ್ಲೆಂಡ್‌ನ ಅನ್ನೆ ಕಿಯೋತ್‌ವಾಂಗ್‌ರನ್ನು 2-6, 6-3, 6-1ರಿಂದ, ಝೆಕ್ ಗಣರಾಜ್ಯದ ನಿಕೋಲ್ ವೈಡಿಸೋವಾ ನೆದರ್ಲೆಂಡಿನ ಮಿಚ್ಚೆಲ್ ಕ್ರಾಜಿಕ್‌ರನ್ನು 6-3, 6-4ರಿಂದ, ಅಮೆರಿಕಾದ ಜಿಲ್ ಕ್ರೇಬಸ್ ಆಸ್ಟ್ರೇಲಿಯಾದ ಜೆಲೆನಾ ಡೊಕಿಕ್‌ರನ್ನು 6-4, 6-2ರಿಂದ, ರಷ್ಯಾದ ಇಲೆನಾ ವೆಸ್ನಿನಾ ಜರ್ಮನಿಯ ಸಬೀನ್ ಲಿಸಿಕ್ಕಿಯವರನ್ನು 7-6, 7-5ರಿಂದ, ಕಜಕೀಸ್ತಾನದ ಯೂರೋಸ್ಲಾವ್ ಸ್ವೆಡೋವಾ ರಷ್ಯಾದ ಅಲ್ಲಾ ಕುದ್ರಿತ್ಸೇವಾರನ್ನು 6-4, 6-2ರಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಚೈನೀಸ್ ತೈಪೈಯ ಚಾನ್ ಯಂಗ್ ಜಾನ್‌ರವರು ಸ್ಪೇನ್‌ನ ವರ್ಜಿನಾ ರುವಾನೋ ಪಾಸ್ಕಲ್‌ರನ್ನು 6-4, 6-1ರಿಂದ, ಝೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಫ್ರಾನ್ಸ್‌ನ ಪೌಲಿನ್ ಪಾರ್ಮೆಂಟಿಯರ್‌ರನ್ನು 6-3, 6-2ರಿಂದ, ಜರ್ಮನಿಯ ಅನ್ನಾ ಲೆನಾ ಗ್ರೊನೆಪೆಲ್ಡ್ ರೊಮೇನಿಯಾದ ಮೋನಿಕಾ ನಿಕುಲೆಸ್ಕುರನ್ನು 6-3, 6-0ಯಿಂದ, ಚೀನಾದ ಲೀ-ನಾ ಥಾಯ್ಲೆಂಡ್‌ನ ಥಾಮರಿನ್ ತಾನಸುಗಮ್‌ರನ್ನು 6-4, 6-4ರಿಂದ, ಸ್ವಿಟ್ಜರ್ಲೆಂಡ್‌ನ ಟಿಮಿಯಾ ಬಾಕ್ಸಿನ್ಸ್ಕಿ ಸ್ವೀಡನ್‌ನ ಸೋಫಿಯಾ ಅರ್ವಿಡ್ಸನ್‌ರನ್ನು 6-2, 6-3ರಿಂದ, ಫ್ರಾನ್ಸ್‌ನ ವರ್ಜೀನಿ ರಜಾನೋ ರಷ್ಯಾದ ಇವ್‌ಜೆನಿಯಾ ರೋದಿನಾರನ್ನು 6-3, 6-4ರಿಂದ, ಅಮೆರಿಕಾದ ಅಲೆಕ್ಸಾ ಗ್ಲಾಚ್ ಕೆನಡಾದ ಸ್ಟಿಫಾನಿಯೆ ದುಬೋಯಿಸ್‌ರನ್ನು 6-3, 6-2ರಿಂದ ಹಾಗೂ ಪೋಲೆಂಡ್‌ನ ಉರ್ಜುವಲಾ ರಾಧ್ವಾಂಸ್ಕಾ ಪೋರ್ಚುಗಲ್‌ನ ಮಿಚ್ಚೆಲ್ ಲಾರ್ಚರ್ ಡೇ ಬ್ರಿಟೋರನ್ನು 4-6, 6-2, 6-4ರಿಂದ ಮಣಿಸಿ ಮೊದಲ ಸುತ್ತನ್ನು ಯಶಸ್ವಿಯಾಗಿ ಮುಗಿಸಿದರು.

ವೆಬ್ದುನಿಯಾವನ್ನು ಓದಿ