ಫ್ರೆಂಚ್ ಓಪನ್: ಕುಜ್ನೆತ್ಸೋವಾ 2ನೇ ಸುತ್ತಿಗೆ ಪ್ರವೇಶ

ಮಂಗಳವಾರ, 26 ಮೇ 2009 (18:26 IST)
PTI
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ರಷ್ಯಾದ ಏಳನೇ ಶ್ರೇಯಾಂಕಿತ ಸ್ವೆಟ್ಲಾನಾ ಕುಜ್ನೆತ್ಸೋವಾ ಅವರು ಮಂಗಳವಾರ ತಮ್ಮ ಎದುರಾಳಿ ಫ್ರೆಂಚ್‌ನ ವೈಲ್ಡ್ ಕಾರ್ಡ್ ಕ್ಲಾರೈ ಫ್ಯುರೆಸ್ಟೈನ್ ಅವರನ್ನು 6-1, 6-4ಪಾಯಿಂಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಸ್ವೆಟ್ಲಾನಾ ಅವರು ಇಂದು ಫ್ರೆಂಚ್ ಓಪನ್‌ನ ಪ್ರಥಮ ಸುತ್ತಿನಲ್ಲಿ ಫ್ರೆಂಚ್‌ನ ಕ್ಲಾರೈಯನ್ನು ಮಣಿಸುವ ಮೂಲಕ ಎರಡನೇ ಸುತ್ತಿಗೆ ಕಾಲಿಟ್ಟಿದ್ದಾರೆ.

ಗೆಲುವಿನ ಓಟದತ್ತ ಕಣ್ಣಿಟ್ಟಿರುವ ರಷ್ಯಾದ ಏಳನೇ ಶ್ರೇಯಾಂಕಿತೆ ಸ್ವೆಟ್ಲಾನಾ ಕುಜ್ನೆತ್ಸೋವಾ ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗಲು ಸಜ್ಜುಗೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ