ಆಂಡಿ ಮುರ್ರೆ ಚಿತ್ತ ವಿಂಬಲ್ಡನ್‌ ಟೈಟಲ್‌ನತ್ತ...

ಗುರುವಾರ, 4 ಜೂನ್ 2009 (15:24 IST)
ರೋಲ್ಯಾಂಡ್ ಗ್ಯಾರೋಸ್‌ನ ಜೇಡಿಮಣ್ಣಿನ ಅಂಕಣದಲ್ಲಿನ ಆಟ ತನಗೆ ಮುಂದಿನ ವಿಂಬಲ್ಡನ್‌ ಪಂದ್ಯಕ್ಕೆ ಸ್ಫೂರ್ತಿ ಎಂದು ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಚಿಲಿಯ ಫೆರ್ನಾಂಡೋ ಗೋನ್ಸಾಲಿಸ್ ವಿರುದ್ಧ ಪರಾಜಯಗೊಂಡ ನಂತರ ಆಂಡಿ ಮುರ್ರೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು.

ಗೆಲುವಿನ ಕನಸಿನಲ್ಲಿದ್ದ ಬ್ರಿಟನ್‌ನ 3ನೇ ಶ್ರೇಯಾಂಕದ ಆಟಗಾರ ಆಂಡಿ ಮುರ್ರೆ ಅವರು 12ನೇ ಶ್ರೇಯಾಂಕದ ಗೋನ್ಸಾಲಿಸ್ ಎದುರು 6-3, 3-6, 6-0, 6-4ರ ಅಂತರದಲ್ಲಿ ಸೋಲುವ ಮೂಲಕ ಫ್ರೆಂಚ್ ಓಪನ್‌ನಿಂದ ನಿರ್ಗಮಿಸಿದ್ದರು.

ಆದರೆ ಫ್ರೆಂಚ್ ಓಪನ್ ಸೋಲಿನ ನಂತರ ಮುರ್ರೆ ಇದೀಗ ವಿಂಬಲ್ಡನ್‌ನತ್ತ ಚಿತ್ತ ನೆಟ್ಟಿದ್ದು, ತನಗೆ ಜೇಡಿಮಣ್ಣಿನಂಕಣದ ಆಟ ಸ್ಫೂರ್ತಿಯಾಗಲಿದೆ ಎಂದು ಹೇಳಿದರು. ತಾನು ಮತ್ತಷ್ಟು ಉತ್ತಮ ಪ್ರದರ್ಶನ ತೋರುವ ಮೂಲಕ ವಿಂಬಲ್ಡನ್ ಗೆಲುವಿನ ಕನಸು ಹೊತ್ತಿರುವುದಾಗಿ ತಿಳಿಸಿದರು.

ಪ್ರಸಕ್ತ ವರ್ಷ ತನಗೆ ತುಂಬಾ ಆಶಾದಾಯಕವಾಗಿರುವುದಾಗಿ ಸಂತಸ ವ್ಯಕ್ತಪಡಿಸಿದ ಮುರ್ರೆ, ತಾನು ಹಲವು ಪಂದ್ಯಗಳನ್ನು ಗೆದ್ದಿರುವುದಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ