ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟ ಸಾನಿಯಾ

ಶನಿವಾರ, 20 ನವೆಂಬರ್ 2010 (10:28 IST)
ಭಾರತದ ಪದಕ ಭರವಸೆಯಾಗಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇಲ್ಲಿ ನಡೆಯುತ್ತಿರುವ ಏಷ್ಯಾ ಗೇಮ್ಸ್‌ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌‍ಗೆ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪ್ರೀ-ಕ್ವಾರ್ಟರ್ ಪಂದ್ಯದಲ್ಲಿ 166ನೇ ರ‌್ಯಾಂಕ್ ಹೊಂದಿರುವ ಸಾನಿಯಾ, ಎದುರಾಳಿ ಆರನೇ ಶ್ರೇಯಾಂಕಿತೆ ಚೀನಾದವರೆ ಆದ ಶುವಾಯಿ ಜಂಗ್ ಅವರನ್ನು 6-2, 6-2ರ ನೇರ ಸೆಟ್‌ನಲ್ಲಿ ಮಣಿಸಿ ಮುನ್ನಡೆದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಉತ್ತಮ ಸರ್ವೀಸ್ ಮೂಲಕ ಗಮನ ಸೆಳೆದ ಸಾನಿಯಾ ಪಂದ್ಯವನ್ನು ಕೇವಲ ಒಂದು ಗಂಟೆ 17 ನಿಮಿಷಗಳಲ್ಲಿ ಅಂತ್ಯಗೊಳಿಸಿದರು.

2006ರ ದೋಹಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಸಾನಿಯಾ ಇದೀಗ ನಡೆಯಲಿರುವ ಎಂಟರ ಘಟ್ಟದ ಹೋರಾಟದಲ್ಲಿ ಥಾಯ್ಲೆಂಡ್‌‍ನ ತಮರೀನ್ ತನಸುಗರ್ಣ್ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ