ವರ್ಲ್ಡ್ ಟೂರ್ ಫೈನಲ್ ಓಪನ್ ಪಂದ್ಯಾವಳಿಯ ಡಬಲ್ಸ್ ವಿಭಾಗದಲ್ಲಿ ಭಾರತದ ಮಹೇಶ್ ಭೂಪತಿ ಮತ್ತು ಮ್ಯಾಕ್ಸ್ ಮಿರ್ನಿಯಿ ಜೋಡಿ, ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವೆಸ್ಲಿ ಮೂಡಿ ಮತ್ತು ಡಿಕ್ ನೊರ್ಮಾನ್ ವಿರುದ್ಧ 6-4, 6-4 ಸೆಟ್ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದಾರೆ.
ಕಳೆದ 2003 ಮತ್ತು 2004ರಲ್ಲಿ ಸೆಮಿಫೈನಲ್ ತಲುಪುವಲ್ಲಿ ವಿಫಲವಾಗಿದ್ದ ಭೂಪತಿ ಜೋಡಿ, ಸುಮಾರು ಆರು ವರ್ಷಗಳ ನಂತರ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದಾರೆ.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾಬ್ ಮತ್ತು ಮೈಕ್ ಬ್ರಯಾನ್ ಜೋಡಿ, ತಮ್ಮ ಎದುರಾಳಿ ಜೋಡಿಯಾದ ಡೇನಿಯಲ್ ನೆಸ್ಟರ್ ಮತ್ತು ನೆನಾದ್ ಜಿಮೊಂಜಿಕ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿಗಳು ತುಂಬಾ ಪ್ರಬಲವಾಗಿದ್ದರಿಂದ ಗೆಲ್ಲಲು ಕಠಿಣ ಪರಿಶ್ರಮದ ಅಗತ್ಯವಿದೆ. ಆದರೆ, ಪಂದ್ಯವನ್ನು ಗೆಲ್ಲುವ ವಿಶ್ವಾಸವಿದೆ ಎಂದು ಮಹೇಶ್ ಭೂಪತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.