ಐಎಚ್‌ಎಫ್ ಲೀಗ್ ಪಂದ್ಯಾವಳಿಯಲ್ಲಿ ಅಗ್ರಶ್ರೇಯಾಂಕಿತ ಆಟಗಾರರು

ಮಂಗಳವಾರ, 28 ಡಿಸೆಂಬರ್ 2010 (17:42 IST)
ಇಂಟರ್‌ನ್ಯಾಷನಲ್ ಹಾಕಿ ಫೆಡರೇಶನ್ ಮತ್ತು ನಿಂಬಸ್ ಸ್ಪೋರ್ಟ್ಸ್ ಜಂಟಿಯಾಗಿ ಆಯೋಜಿಸಲಿರುವ ಪ್ರೀಮಿಯರ್ ಹಾಕಿ ಲೀಗ್ ಮಾದರಿಯ ಸ್ಟೈಲ್ ಮಿಲಿಯನ್ ಡಾಲರ್ ಹಾಕಿ ಪಂದ್ಯಾವಳಿಯಲ್ಲಿ, ದೇಶದ ಅಗ್ರಶ್ರೇಯಾಂಕಿತ ಹಾಕಿ ಆಟಗಾರರು ಹಾಗೂ 60 ವಿದೇಶಿ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಇಂಡಿಯನ್ ಹಾಕಿ ಫೆಡರೇಶನ್ ಅಧ್ಯಕ್ಷ ಆರ್.ಕೆ.ಶೆಟ್ಟಿ ಮತ್ತು ನಿಂಬಸ್ ಸ್ಪೋರ್ಟ್ಸ್ ಮುಖ್ಯಸ್ಥ ಹರೀಶ್ ಥಾವಾನಿ ಖಚಿತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಥಾವಾನಿ ಪ್ರಕಾರ, ಸೆಪ್ಟೆಂಬರ್ 2011ರಿಂದ ಫೆಬ್ರವರಿ 2012ರ ವರೆಗೆ ಪಂದ್ಯಾವಳಿ ನಡೆಯಲಿದ್ದು, ಭಾರತದ ಅಗ್ರಶ್ರೇಯಾಂಕಿತ ಆಟಗಾರರಾದ ರಾಜ್ಪಾಲ್ ಸಿಂಗ್, ಸರ್ದಾರಾ ಸಿಂಗ್, ಅರ್ಜುನ್ ಹಾಲಪ್ಪ, ಶಿವೇಂದರ್ ಸಿಂಗ್, ಸಂದೀಪ್ ಸಿಂಗ್, ಅಡ್ರಿಯಾನ್ ಡಿಸೋಜಾ ಸೇರಿದಂತೆ ಇತರ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 1 ಮಿಲಿಯನ್ ಡಾಲರ್ ನಗದು ಬಹುಮಾನ ನೀಡಲಾಗುತ್ತದೆ. ಆದರೆ, ಮುಂಬರುವ ದಿನಗಳಲ್ಲಿ ಸಂಪೂರ್ಣ ವಿವರಗಳು ಬಹಿರಂಗವಾಗಲಿವೆ ಎಂದು ಥಾವಾನಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ