ಜ್ವರದಿಂದ ಬಳಲುತ್ತಿರುವ ಹೊರತಾಗಿಯೂ ಮುಂಬರುವ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರಾಂಡ್‌ಸ್ಲಾಮ್ ಟೂರ್ನಿಯನ್ನು ವಿಶ್ವ ನಂ.1 ಆಟಗಾರ ರಾಫೆಲ್ ನಡಾಲ್ ಗೆಲ್ಲಬಲ್ಲರು ಎಂದು ಅಮೆರಿಕಾದ ಮಾಜಿ ದಂತಕಥೆ ಆಂಡ್ರೆ ಆಗಾಸ್ಸಿ ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಡಾಲ್ ಫಿಟ್‌ನೆಸ್ ಬಗ್ಗೆ ಅನುಮಾನ ಮೂಡಿವೆ. ಆಸ್ಟ್ರೇಲಿಯಾದಲ್ಲಿನ ಉಷ್ಣಾಂಶ ಪರಿಸ್ಥಿತಿಯನ್ನು ನಡಾಲ್ ನಿಭಾಯಿಸಬಲ್ಲರೇ ಎಂಬುದು ಪ್ರಮುಖ ವಿಷಯವಾಗಿದೆ. ಆದರೆ 2010ರ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ನಡಾಲ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿರುವ ಮಾಜಿ ವಿಶ್ವ ನಂ.1 ಆಟಗಾರ ಆಗಾಸ್ಸಿ, ಇಲ್ಲಿಯೂ ಸ್ಪಾನಿಶ್ ಆಟಗಾರ ಫೆವರೀಟ್ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
ರೋಜರ್ ಫೆಡರರ್ ಕೂಡಾ ವರ್ಷಾಂತ್ಯದಲ್ಲಿ ಶ್ರೇಷ್ಠ ಟೆನಿಸ್ ಆಡಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಉತ್ತಮ ಪೈಪೋಟಿ ಮೂಡಿ ಬರಲಿದೆ. ಆದರೆ ನಡಾಲ್ ಅವರಿಗೆ ಅವಕಾಶ ಹೆಚ್ಚಿದೆ ಎಂದರು.
2010ರಲ್ಲಿ ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್‌ಗಳನ್ನು ಬಗಲೇರಿಸಿದ್ದ ನಡಾಲ್, ಟೀಕಾಕಾರರ ಬಾಯಿ ಮುಚ್ಚಿಸಿದ್ದರು.