ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಮುಂಬರುವ ಮಲೇಷ್ಯಾ ಓಪನ್‌ನಿಂದಲೂ ಹೊರಗುಳಿಯಲಿದ್ದಾರೆ.
ಇದರೊಂದಿಗೆ ಹಿಮ್ಮಡಿ ನೋವಿಗೊಳಗಾಗಿರುವ ಸೈನಾ ಪ್ರಮುಖ ಮೂರು ಟೂರ್ನಮೆಂಟ್‌ಗಳನ್ನು ಕಳೆದುಕೊಂಡತಾಂಗಿದೆ. ಮಲೇಷ್ಯಾ ಓಪನ್ ಸೂಪರ್ ಸಿರೀಸ್ ಜನವರಿ 18ರಂದು ಆರಂಭವಾಗಲಿದ್ದು, ಆದರೆ ಸೈನಾ ಅವರು ಪೂರ್ಣ ದೈಹಿಕ ಕ್ಷಮತೆ ಹೊಂದಿಲ್ಲ ಎಂದು ಕೋಚ್ ಗೋಪಿಚಂದ್ ತಿಳಿಸಿದ್ದಾರೆ.
ಸೈನಾ ಶೀಘ್ರ ಗತಿಯಲ್ಲಿ ಚೇತರಿಕೆ ಪಡೆಯುತ್ತಿದ್ದಾರೆ. ಆದರೆ ಇಂತಹ ಮಹತ್ವದ ಟೂರ್ನಿಗೆ ಆಕೆ ಪೂರ್ಣವಾಗಿ ಸಿದ್ಧರಾಗಿಲ್ಲ. ಹಾಗಾಗಿ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದೇವೆ ಎಂದವರು ವಿವರಿಸಿದರು.
ಅದೇ ಹೊತ್ತಿಗೆ ವಿಶ್ವ ನಂ.4 ಆಟಗಾರ್ತಿ ಆಗಿರುವ ಸೈನಾ ಶೀಘ್ರದಲ್ಲೇ ದೈಹಿಕ ಕ್ಷಮತೆ ವಾಪಾಸ್ ಪಡೆಯುವ ವಿಶ್ವಾಸವನ್ನು ಕೋಚ್ ವ್ಯಕ್ತಪಡಿಸಿದ್ದು, ಕೊರಿಯಾ ಸೂಪರ್ ಸಿರೀಸ್‌ನಲ್ಲಿ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.