ಏಷ್ಯಾ ಕಪ್‌ನಿಂದ ಭಾರತ ಪುಟ್ಬಾಲಿಗೆ ಹೊಸ ತಿರುವು: ಹಂಗ್ಟನ್

ಭಾನುವಾರ, 16 ಜನವರಿ 2011 (10:43 IST)
27 ವರ್ಷಗಳ ನಂತರ ಏಷ್ಯನ್ ಕಪ್ ಪುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪಾಲ್ಗೊಳ್ಳುತ್ತಿದೆ. ಈ ಕೂಟವು ಭಾರತದ ಪುಟ್ಬಾಲ್ ಪಾಲಿಗೆ ಹೊಸ ತಿರುವು ಆಗಿರಲಿದೆ ಎಂದು ಕೋಚ್ ಬಾಬ್ ಹಂಗ್ಟನ್ ಅಭಿಪ್ರಾಯಪಟ್ಟಿದ್ದಾರೆ.

ಎಐಎಫ್‌ಎಪ್ ವೈಫಲ್ಯದಿಂದಾಗಿ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ ಟೂರ್ನಿಯಲ್ಲಿ ಆಡುವ ಮೂಲಕ ಖಂಡಿತವಾಗಿಯೂ ಹೊಸ ಅಲೆ ಎಬ್ಬಿಸಲಿದೆ ಎಂದವರು ಹೇಳಿದರು.

ಭಾರತದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಆಟಗಾರರಿಗೆ ಅಗತ್ಯವಾದ ತರಬೇತಿ ಲಭಿಸುತ್ತಿಲ್ಲ. ಇದುವೇ ದೇಶದ ಫುಟ್ಬಾಲ್ ಹಿನ್ನೆಡೆಗೆ ಕಾರಣವಾಗಿದೆ ಎಂದು ಕೋಚ್ ಪುನರುಚ್ಛಿಸಿದರು.

ಏಷ್ಯನ್ ಕಪ್‌ನಲ್ಲಿ ಭಾಗವಹಿಸುತ್ತಿರುವ ಭಾರತ ಇದೀಗ ಐಎಮ್‌ಜಿ-ರಿಲಯನ್ಸ್ ಜತೆ 700 ಮಿಲಿಯನ್ ಡಾಲರ್ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಮಾಡಿದೆ. ಇದರಿಂದ ದೇಶದ ಕ್ರೀಡೆಯಲ್ಲಿ ಹೊಸ ಯುಗ ಆರಂಭವಾಗಲಿದೆ ಎಂದು 63ರ ಹರೆಯವರಾದ ಇಂಗ್ಲೆಂಡ್‌ನ ಹಂಗ್ಟನ್ ನುಡಿದರು.

ವೆಬ್ದುನಿಯಾವನ್ನು ಓದಿ