ಇತ್ತೀಚೆಗಷ್ಟೇ ಕ್ರಿಕೆಟ್ ಜಗತ್ತನ್ನು ಅಲ್ಲೋಲ ಕಲ್ಲೋಲಗೊಳಿಸಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದ ಬಿಸಿ ಇದೀಗ ಟೆನಿಸ್ ಕ್ರೀಡೆ ತಟ್ಟಿದೆಯಂತೆ..!. ಈ ಬಗ್ಗೆ ತನಿಖಾ ವರದಿಯೊಂದನ್ನು ಇಟಲಿಯ ಮಾಧ್ಯಮ ಬಿಡುಗಡೆ ಮಾಡಿದೆ.
ಈ ಎಲ್ಲ ವಿಚಾರಗಳು ಸಹಜವಾಗಿಯೇ ಟೆನಿಸ್‌ನ ಅಗ್ರ ಆಟಗಾರ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಅವರನ್ನು ಕೆರಳಿಸಿದೆ. ಟೆನಿಸ್ ಕ್ರೀಡಾಳುಗಳಿಗೆ ಸ್ಪಷ್ಟ ಸಂದೇಶ ರವಾನಿಸಿರುವ ವಿಶ್ವ ನಂ.2 ಆಟಗಾರ ಫೆಡರರ್ ಯಾವುದೇ ಮೋಸದಾಟದಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಎಂಬುದು ಉದ್ದೀಪನಾ ದ್ರವ್ಯ ವಂಚನೆಗೆ ಸಮಾನವಾಗಿದೆ. ಇದು ಕ್ರೀಡೆಯ ಪ್ರಾಮಾಣಿಕತೆಗೆ ಧಕ್ಕೆಯನ್ನುಂಟು ಮಾಡಲಿದ್ದು ಅಭಿಮಾನಿಗಳನ್ನು ಟೆನಿಸ್‌ನತ್ತ ಸಳೆಯುವಲ್ಲಿ ವಿಫಲವಾಗಲಿದೆ ಎಂದರು.
2008ರಲ್ಲಿ ಬೆಟ್ಟಿಂಗ್ ಆರೋಪ ಎದುರಿಸಿದ್ದ ನಿಕೊಲೆ ಡೆವಿಡೆಂಕೊ ನಂತರ ನಡೆದ ತನಿಖೆಯಿಂದಾಗಿ ಆರೋಪ ಮುಕ್ತವಾಗಿದ್ದರು.