ಆಸೀಸ್ ಓಪನ್: ಫೈನಲ್ ಪ್ರವೇಶಿಸಿದ ಕಿಮ್ ಕ್ಲಿಸ್ಟರ್ಸ್

ಗುರುವಾರ, 27 ಜನವರಿ 2011 (15:32 IST)
PTI
ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯನ್‌ ಮೂಲದ ಕಿಮ್ ಕ್ಲಿಸ್ಟರ್ಸ್, ತಮ್ಮ ಎದುರಾಳಿ ರಷ್ಯಾದ ವೆರಾ ಜುವಾನ್‌ರೆವಾ ವಿರುದ್ಧ ಜಯಗಳಿಸಿ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.

ಸತತ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ ಕ್ಲಿಸ್ಟರ್ಸ್, ಜುವಾನ್‌ರೆವಾ ವಿರುದ್ಧ 6-3, 6-3 ಸೆಟ್‌ಗಳ ಅಂತರದಿಂದ ಗೆಲುವು ಪಡೆಯುವಲ್ಲಿ ಯಶಸ್ವಿಯಾದರು.

ವೆರಾ ಜುವಾನ್‌ರೆವಾ ಪ್ರಬಲ ಎದುರಾಳಿಯಾಗಿದ್ದರಿಂದ ಪಂದ್ಯ ತುಂಬಾ ಕಠಿಣವಾಗಿರುತ್ತದೆ. ಆದ್ದರಿಂದ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದರಿಂದ ಪಂದ್ಯದಲ್ಲಿ ಗೆಲುವು ನನ್ನದಾಯಿತು ಎಂದು ಕ್ಲಿಸ್ಟರ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.

26 ವರ್ಷ ವಯಸ್ಸಿನ ಜುವಾನ್‌ರೆವಾ, ಪಂದ್ಯದ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ನಂತರ ಅದೇ ಲಯವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಿಲ್ಲ. ಪ್ರತಿಯೊಂದು ವಿಭಾಗದಲ್ಲಿ ಕ್ಲಿಸ್ಟರ್ಸ್ ಮೇಲುಗೈ ಸಾಧಿಸಿದರು.

ಕ್ಲಿಸ್ಟರ್ಸ್, ಫೈನಲ್ ಪಂದ್ಯದಲ್ಲಿ ಚೀನಾದ ಅಗ್ರಶ್ರೇಯಾಂಕಿತ ಆಟಗಾರ್ತಿ ಲಿ ನಾ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ