ಕೊರಿಯನ್ ಓಪನ್: ಸೋಲನುಭವಿಸಿದ ಸೈನಾ, ಪಿ.ಕಶ್ಯಪ್‌

ಗುರುವಾರ, 27 ಜನವರಿ 2011 (18:57 IST)
PTI
ಸಿಯೋಲ್‌ನಲ್ಲಿ ನಡೆಯುತ್ತಿರುವ ಕೊರಿಯನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಎರಡನೇ ಸುತ್ತಿನ ಪಂದ್ಯದಲ್ಲಿ, ಸೈನಾ ನೆಹ್ವಾಲ್ ನಿರಾಸೆಯ ಪ್ರದರ್ಶನ ನೀಡಿ ಜಪಾನ್ ಎದುರಾಳಿ ಸಯಕಾ ಸಟೊ ವಿರುದ್ಧ ಸೋಲನುಭವಿಸಿ ನಿರ್ಗಮಿಸಿದ್ದಾರೆ.

ವಿಶ್ವದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಸೈನಾ, ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ತೈಪೆಯ ಝು ಯಿಂಗ್ ವಿರುದ್ಧ ಜಯಗಳಿಸಿದ್ದರು.ಎರಡನೇ ಸುತ್ತಿನ ಪಂದ್ಯದಲ್ಲಿ 21-17 19-21 11-21 ಸೆಟ್‌ಗಳ ಅಂತರದಿಂದ ಸೋಲನುಭವಿಸಿದ್ದಾರೆ.

ಮತ್ತೊಬ್ಬ ಆಟಗಾರ ಪಿ.ಕಶ್ಯಪ್, ಎರಡನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಎದುರಾಳಿ ಡೆನ್ಮಾರ್ಕ್‌ನ ಪೀಟರ್ ಹಾಗ್ ಗಾಡೆ ವಿರುದ್ಧ 16-21 13-21ಸೆಟ್‌ಗಳ ವಿರುದ್ಧ ಸೋಲನುಭವಿಸಿದ್ದಾರೆ.

ಜ್ವಾಲಾಗುಟ್ಟಾ ಮತ್ತು ವಿ.ಡಿಜು ಜೋಡಿ ಕೂಡಾ, ಡಬಲ್ಸ್ ವಿಭಾಗದಲ್ಲಿ ಆರನೇ ಶ್ರೇಯಾಂಕಿತ ಚೀನಾದ ತಾವೊ ಜಿಯಾಮಿಂಗ್ ಮತ್ತು ಝಿಂಗ್ ಟಿಯಾನ್ ವಿರುದ್ಧ 16-21 13-21 ಸೆಟ್‌ಗಳಿಂದ ಸೋಲಿನ ರುಚಿ ಸವಿದಿದ್ದಾರೆ.

ವೆಬ್ದುನಿಯಾವನ್ನು ಓದಿ