ಸಿಂಗಾಪೂರ್ ಎಟಿಪಿ ಚಾಲೆಂಜರ್ ಟೆನಿಸ್ ಡಬಲ್ಸ್ ವಿಭಾಗದಲ್ಲಿ, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೋಮದೇವ್ ತಮ್ಮ ದಕ್ಷಿಣ ಆಫ್ರಿಕಾ ಜೊತೆಗಾರ ರಿಕ್ ಡೆ ವೊಯಿಸ್ಟ್ ಅವರೊಂದಿಗೆ ಕ್ವಾರ್ಟರ್‌ಫೈನಲ್‌ನಲ್ಲಿ ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ.
ಸೋಮದೇವ್-ರಿಕ್ ಜೋಡಿ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರಷ್ಯಾದ ಟುರ್ಸೊನೊವ್ ಮತ್ತು ಚೀನಾದ ಜಿಮ್ಮಿ ವಾಂಗ್ ಜೋಡಿಯ ವಿರುದ್ಧ 6-4 3-6 10-7 ಸೆಟ್‌ಗಳಿಂದ ಜಯಗಳಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ದೇವವರ್ಮನ್-ಡೆವೊಯಿಸ್ಟ್ ಜೋಡಿ,ತಮ್ಮ ಥೈಲೆಂಡ್ ಎದುರಾಳಿ ಜೋಡಿಯಾದ ಸೊಂಚಾಯಿ ಮತ್ತು ಸೊಂಚಾಟ್ ರತಿವತನಾ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.
ಥೈಲೆಂಡ್ ಜೋಡಿ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಪುರವ್ ರಾಜಾ ಮತ್ತು ಫಿಲಿಪ್ಪಿನೊ ವೊನ್ರಾಡ್ ಟ್ರಿಟ್ ಹುವೆ ವಿರುದ್ಧ 7-6(5) 2-6 10-5 ಸೆಟ್‌ಗಳ ಅಂತರದಿಂದ ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ.
ಸೋಮದೇವ್, ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ, ಆಸ್ಟ್ರೇಲಿಯಾದ ಜಾನ್ ಮಿಲ್‌ಮ್ಯಾನ್ ವಿರುದ್ಧ ನೇರ ಸೆಟ್‌ಗಳಿಂದ ಜಯಗಳಿಸಿ ಕ್ವಾರ್ಟರ್‌ಫೈನಲ್ ಹಂತವನ್ನು ತಲುಪಿದ್ದಾರೆ.