ಬೆಂಗಳೂರು: ಪ್ರತಿಯೊಬ್ಬ ಮನುಷ್ಯನಿಗೂ ದೇಹದ ಯಾವುದಾದರೂ ಒಂದು ಭಾಗದಲ್ಲಿ ಮಚ್ಚೆ ಇದ್ದೇ ಇರುತ್ತದೆ. ಅದರಲ್ಲೂ ಎದೆ ಮೇಲೆ ಮಚ್ಚೆ ಇದ್ದರೆ ಏನು ಲಾಭ, ಏನು ನಷ್ಟ ಎಂಬುದನ್ನು ತಿಳಿದುಕೊಳ್ಳಿ.
ಮಚ್ಚೆ ಕೇವಲ ಗುರುತು ಮಾತ್ರವಲ್ಲ, ಸೌಂದರ್ಯವನ್ನೂ ಇಮ್ಮಡಿಗೊಳಿಸುತ್ತದೆ. ಅದರಲ್ಲೂ ದೇಹದ ಕೆಲವೊಂದು ಭಾಗದಲ್ಲಿ ಮಚ್ಚೆ ಇದ್ದರೆ ನೈಸರ್ಗಿಕ ದೃಷ್ಟಿ ಬೊಟ್ಟು ಎನ್ನಬಹುದು. ಕೆಲವರಿಗೆ ಕೈ, ಮುಖ, ಬೆನ್ನು, ಮೊಣಕಾಲು ಹೀಗೆ ದೇಹದ ಕೆಲವೊಂದು ಭಾಗದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಚ್ಚೆ ಇರಬಹುದು.
ಒಂದು ವೇಳೆ ಎದೆ ಭಾಗದಲ್ಲಿ ಮಚ್ಚೆ ಇದ್ದರೆ ಅದರಿಂದ ನಮಗಾಗುವ ಲಾಭಗಳು ಏನು ಎಂದು ನೋಡೋಣ. ಎದೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ ನೀವು ತುಂಬಾ ಭಾವನಾತ್ಮಕ ವ್ಯಕ್ತಿ ಮತ್ತು ಸಂವೇದನಾಶೀಲರು ಎಂದು ಅರ್ಥವಾಗಿದೆ. ನಿಮ್ಮ ಸಮೀಪವರ್ತಿಗಳೊಂದಿಗೆ ಗಾಢ ಸಂಬಂಧ ಹೊಂದಿರುತ್ತೀರಿ ಮತ್ತು ಇತರರನ್ನು ಪ್ರೀತಿಸುವ ಗುಣ ನಿಮ್ಮದಾಗಿರುತ್ತದೆ.
ಒಂದು ವೇಳೆ ಎದೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ ನೀವು ಜೀವನದಲ್ಲಿ ಸಾಕಷ್ಟು ಐಶ್ವರ್ಯ ಸಂಪಾದನೆ ಮಾಡುತ್ತೀರಿ ಮತ್ತು ಶ್ರೀಮಂತ ಜೀವನ ನಡೆಸುತ್ತೀರಿ. ನಿಮ್ಮ ಜೀವನದಲ್ಲಿ ಹಣಕ್ಕೆ ಯಾವುದೇ ಕೊರತೆಯಾಗದು. ಹಣಕಾಸಿನ ವಿಚಾರದಲ್ಲಿ ತೃಪ್ತಿದಾಯಕ ಜೀವನ ನಡೆಸುತ್ತೀರಿ ಎಂದರ್ಥವಾಗಿದೆ.