ಶ್ರಾದ್ಧ ಕಾರ್ಯ ಮಾಡುವಾಗ ಈ ನಿಯಮ ಪಾಲಿಸದಿದ್ದರೆ ಈ ಕೆಡುಕುಗಳು ತಪ್ಪಿದ್ದಲ್ಲ

Krishnaveni K

ಮಂಗಳವಾರ, 30 ಜುಲೈ 2024 (09:04 IST)
ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಗತಿಸಿದ ಪೂರ್ವಜರಿಗೆ ಒಂದು ದಿನ ತರ್ಪಣ ನೀಡುವುದು ಅಥವಾ ಶ್ರಾದ್ಧ ಕಾರ್ಯ ಮಾಡುವುದು ಅತ್ಯಂತ ಶ್ರೇಯಸ್ಕರ ಕೆಲಸವಾಗಿದೆ. ಒಂದು ವೇಳೆ ಪಿತೃಗಳಿಗೆ ಶ್ರಾದ್ಧ ಕಾರ್ಯ ಸರಿಯಾಗಿ ಮಾಡದೇ ಇದ್ದರೆ ಪಿತೃ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.

ಪಿತೃ ಕೋಪ ಅಥವಾ ಪಿತೃ ಶಾಪ ಎನ್ನುವುದು ಅತ್ಯಂತ ಕೆಟ್ಟದ್ದಾಗಿರುತ್ತದೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಸಂತಾನ, ವಿವಾಹ ಭಾಗ್ಯ, ಸಮೃದ್ಧಿ ನೆಲೆಸಿರಬೇಕಾದರೆ ಶ್ರಾದ್ಧ ಕಾರ್ಯಗಳು ಕಾಲಾನುಸಾರವಾಗಿ ಮಾಡುತ್ತಾ ಬರಬೇಕು. ಇಲ್ಲದೇ ಹೋದರೆ ಕುಟುಂಬದಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ.

ಪಿತೃ ಪಕ್ಷದಲ್ಲಿ ಶ್ರಾದ್ಧ ಕಾಲ ಮಾಡಲು ಶ್ರೇಷ್ಠ ಸಮಯವಾಗಿದೆ. ನಮ್ಮ ಗತಿಸಿದ ಹಿರಿಯರಿಗೆ ನೀರಿನಲ್ಲಿ ಪಿಂಡ ಬಿಡುವುದು, ಕಾಗೆಗೆ ನೀಡುವುದು, ಗೋವಿಗೆ ನೀಡುವ ಮೂಲಕ ಅವರಿಗೆ ವರ್ಷಕ್ಕೊಮ್ಮೆಯಾದರೂ ಆಹಾರ ತಲುಪುವಂತೆ ಮಾಡಿದರೆ ನಮ್ಮ ಕುಟುಂಬವೂ ನೆಮ್ಮದಿಯಾಗಿರುವುದು.

ಶ್ರದ್ಧೆಯಿಂದ ಮಾಡುವುದನ್ನೇ ಶ್ರಾದ್ಧ ಎನ್ನುತ್ತಾರೆ. ಹೀಗಾಗಿ ಶ್ರಾದ್ಧ ಮಾಡುವಾಗ ನಾವು ಸಂಪೂರ್ಣವಾಗಿ ಮಡಿಯಲ್ಲಿದ್ದು ಶ್ರದ್ಧೆಯಿಂದ ಮಾಡುವುದು ಅಗತ್ಯವಾಗಿದೆ. ತಾಮಸ ಆಹಾರಗಳನ್ನು ಸೇವಿಸದೇ ಹಿಂದಿನ ದಿನದಿಂದಲೇ ಸಾತ್ವಿಕ ಆಹಾರ, ಬ್ರಹ್ಮಚರ್ಯ ಪಾಲಿಸಿ ವ್ರತ ಮಾಡಿ ಪಿತೃಗಳ ಕಾರ್ಯ ಮಾಡುವುದರಿಂದ ನಮ್ಮ ವಂಶಕ್ಕೇ ಸಮೃದ್ಧಿ ಸಿಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ