ಹುಟ್ಟುಹಬ್ಬವನ್ನು ಹೀಗೆ ಆಚರಿಸಿದರೆ ನಿಮಗೆ ಲಕ್ಷ್ಮೀದೇವಿ ಒಲಿಯುತ್ತಾಳೆ

ಸೋಮವಾರ, 22 ಜನವರಿ 2018 (07:07 IST)
ಬೆಂಗಳೂರು : ಈಗಿನ ದಿನಗಳಲ್ಲಿ ಜನ್ಮ ತಿಥಿ ಅಥವಾ ಜನ್ಮ ನಕ್ಷತ್ರದ ಅನುಸಾರ ಯಾರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಈ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತದೆ. ಹುಟ್ಟುಹಬ್ಬದಂದು ಏನು ಮಾಡಿದ್ರೆ ಒಳಿತು ಎಂಬ ಸಂಗತಿ ತಿಳಿಸಿದೆ.

 
ಹುಟ್ಟುಹಬ್ಬದಂದು ಲಕ್ಷ್ಮೀ  ದೇವಸ್ಥಾನಕ್ಕೆ ಹೋಗಿ ಸೇವೆ ಮಾಡುವುದರಿಂದ ಸಂತೋಷ, ಸಮೃದ್ಧಿ, ಶ್ರೀಮಂತಿಕೆ ನಿಮ್ಮದಾಗುತ್ತದೆಯಂತೆ. ಹುಟ್ಟುಹಬ್ಬ ಸೋಮವಾರದಂದು ಬಂದಿದ್ದರೆ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ಕೀರು ನೈವೇದ್ಯ ಮಾಡಿ ಬಡ ಕನ್ಯಗೆ ನೀಡಿ. ಮಂಗಳವಾರದಂದು ಬಂದರೆ ಲಕ್ಷ್ಮೀದೇವಿಗೆ ಉಡಿಸಿದ ಕೆಂಪು ಸೀರೆಯನ್ನು ಬ್ರಾಹ್ಮಣರ ಪತ್ನಿಗೆ ನೀಡಿ. ಬುಧವಾರದ ದಿನ ಹುಟ್ಟುಹಬ್ಬ ಬಂದರೆ ಹಸಿರು ಗಾಜಿನ ಬಳೆಯನ್ನು ಲಕ್ಷ್ಮೀದೇವರಿಗೆ ಅರ್ಪಿಸಿ, ಅದನ್ನು ಹುಡುಗಿಯರಿಗೆ ನೀಡಿ. ಗುರುವಾರ ಲಕ್ಷ್ಮೀ ನೈವೇದ್ಯ ಮಾಡಿದ ಸೋಂಪನ್ನು ಬ್ರಾಹ್ಮಣರಿಗೆ ನೀಡಿ. ಶುಕ್ರವಾರ ಅತ್ರವನ್ನು ಲಕ್ಷ್ಮೀಗೆ ಅರ್ಪಿಸಿ, ನಂತರ ಅದನ್ನು ಬ್ರಾಹ್ಮಣ ಕನ್ಯೆಗೆ ನೀಡಿ. ಶನಿವಾರ ಹುಟ್ಟುಹಬ್ಬವಾದ್ರೆ ಹಣ್ಣುಗಳನ್ನು ಲಕ್ಷ್ಮೀಗೆ ಅರ್ಪಿಸಿ ಅದನ್ನು ಕಾರ್ಮಿಕರಿಗೆ ಕೊಡಿ. ಭಾನುವಾರ ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಲಕ್ಷ್ಮೀ ದೇವಿಗೆ ಅರ್ಪಿಸಿದ ಗೋಧಿ ಹಾಗು ಕಾಕಂಬಿಯನ್ನು ಬಡವರಿಗೆ ಹಂಚಿ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ