ಈ ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿಂದರೆ ತುಂಬಾ ಅಪಾಯವಂತೆ!

ಭಾನುವಾರ, 21 ಜನವರಿ 2018 (12:12 IST)
ಬೆಂಗಳೂರು : ಎಲ್ಲರೂ ಈಗ ಹೆಚ್ಚಾಗಿ ಪ್ರಿಡ್ಜ್ ಗಳನ್ನು ಬಳಸುತ್ತಿದ್ದು, ಎಲ್ಲಾ ವಸ್ತುಗಳನ್ನು ಅದರಲ್ಲೇ ಶೇಖರಿಸಿ ಇಡುವುದನ್ನು ರೂಢಿಮಾಡಿಕೊಂಡಿದ್ದಾರೆ. ಫ್ರಿಡ್ಜ್ ವಸ್ತುಗಳನ್ನು ಕೆಡದಂತೆ ಕಾಪಾಡುತ್ತದೆಯಾದರೂ ಕೆಲವೊಂದು ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ಅದು ವಿಷವಾಗಿ ಪರಿಣಮಿಸುವ ಸಂಭವವಿರುತ್ತದೆ. ಅದನ್ನು ನಾವು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಫ್ರಿಡ್ಜ್ ನಲ್ಲಿ ಇಡಲೇಬಾರದಂತ ವಸ್ತುಗಳು ಯಾವುದೆಂದು ಮೊದಲು ತಿಳಿದುಕೊಳ್ಳಿ.

 
ಉತ್ತಮ ಪೊಷ್ಟಿಕಾಂಶದಿಂದ ಕೂಡಿರುವ ಬಾಳೆಹಣ್ಣನ್ನು  ಫ್ರಿಡ್ಜ್ ನಲ್ಲಿಡಬಾರದು. ಇದರಿಂದ ಅದು ಪೊಷ್ಟಿಕಾಂಶ ಕಳೆದುಕೊಂಡು ಹಲವು ರೋಗಗಳಿಗೆ ಕಾರಣವಾಗುತ್ತದೆ. ಆಲೂಗಡ್ಡೆಯನ್ನು ಕೂಡ ಫ್ರಿಡ್ಜ್ ನಲ್ಲಿ ಇಡಬಾರದು. ಯಾಕೆಂದರೆ ಶೀತದ ಉಷ್ಣತೆಯಿಂದ ಇದು ಪಿಸ್ಟವನ್ನು ಸಕ್ಕರೆಗೆ ಹೆಚ್ಚು ವೇಗವಾಗಿ ಮಾರ್ಪಡಿಸುತ್ತದೆ. ಆಗ ಇದನ್ನು ತಿಂದರೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.

 
ಸಾಮಾನ್ಯವಾಗಿ ಎಲ್ಲರೂ ಬ್ರೇಡ್ ಗಳನ್ನು ಹೆಚ್ಚು ಬಳಸುತ್ತಾರೆ. ಆದರೆ ಇದನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬಾರದು. ಇಟ್ಟರೆ ಅದು ಬೇಗ ಗಟ್ಟಿಯಾಗಿಬಿಡುತ್ತದೆ. ಟೊಮೆಟೊವನ್ನು ಕೂಡ ಫ್ರಡ್ಜ್ ನಲ್ಲಿ ಇಡಬಾರದು. ಇದರಿಂದ ಅದು ತನ್ನ ವಾಸನೆಯನ್ನು ಕಳೆದುಕೊಳ್ಳುತ್ತದೆ. ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿಡುವುದರ ಬಗ್ಗೆ ದೀರ್ಘ ಕಾಲದ ಚರ್ಚೆ ನಡೆದಿತ್ತು. ಮೊಟ್ಟೆಯನ್ನು ಫ್ರಿಡ್ಜ್ ನಲ್ಲಿಡುವುದರಿಂದ ಅದು ವಾಸನೆ ಹಾಗು ರುಚಿಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಅವುಗಳನ್ನು ಯಾವಾಗಲೂ ರೂಂ ಟೆಂಪರೆಚರ್ ನಲ್ಲೇ ಇಇಡಬೇಕು ಎಂದು ತಜ್ಞರು ಹೇಳುತ್ತಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ