ಮುಖದ ಅಂದ ಹೆಚ್ಚಾಗಬೇಕೆ…? ಈ ಎಣ್ಣೆ ಬಳಸಿ ನೋಡಿ

ಭಾನುವಾರ, 21 ಜನವರಿ 2018 (11:41 IST)
ಬೆಂಗಳೂರು : ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದನ್ನು ಮುಖಕ್ಕೆ ಹಚ್ಚುವುದರಿಂದಲೂ ಮುಖದ ಅಂದ ಇನ್ನಷ್ಟು ಹೆಚ್ಚುತ್ತದೆಯಂತೆ. ಕೆಲವವರಿಗೆ ಮುಖಕ್ಕೆ ಕೊಬ್ಬರಿ ಎಣ್ಣೆ ತಾಗಿದರೆ ಮುಖ ಹಾಳಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅದು ಸುಳ್ಳು. ಕೊಬ್ಬರಿ ಎಣ್ಣೆಯಲ್ಲಿ ಆಂಟಿ ಆಕ್ಸಿಡೆಂಟ್ ಹಾಗಿ ಮಿಟಮಿನ್ ಇ  ಚರ್ಮಕ್ಕೆ ಬಲವನ್ನು ನೀಡುವುದರ ಜೊತೆಗೆ ಕಾಂತಿಯನ್ನು ನೀಡುತ್ತದೆ.

 
ಕೊಬ್ಬರಿ ಎಣ್ಣೆಯನ್ನು ಹೇಗೆ ಮುಖಕ್ಕೆ ಉಪಯೋಗಿಸುವುದು ಎಂದು ಮೊದಲು ತಿಳಿಯಿರಿ.  ರಾತ್ರಿ ಮಲಗುವ ಮೊದಲು ಕೊಬ್ಬರಿಎಣ್ಣೆಯನ್ನು ಮುಖಕ್ಕೆ ಹಚ್ಚಿ 15 ನಿಮಿಷ ಮಸಾಜ್ ಮಾಡುವುದರಿಂದ ಚರ್ಮ ಸುಕ್ಕುಗಟ್ಟುವುದು ಕಡಿಮೆಯಾಗುವುದರ ಜೊತೆಗೆ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಬಿಸಿಲಿಗೆ ಹೋದಾಗ ಚರ್ಮ ಒಣಗಿದಂತಾಗುತ್ತದೆ. ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಒಣಗಿದ ಚರ್ಮ ಕೋಮಲವಾಗುತ್ತದೆ. ಹಾಗೆ ಮುಖದಲ್ಲಿ ಉರಿ ಇದ್ದರೆ ಅದನ್ನು ಕಡಿಮೆಮಾಡುತ್ತದೆ.

 
ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಮಸಾಜ್ ಮಾಡಿದರೆ ಡೆಡ್ ಸ್ಕೀನ್ ಗಳು ಹೋಗಿ ತ್ವಚೆ ಹೊಳೆಯುತ್ತದೆ. ಹಾಗೆ ಕೊಬ್ಬರಿ ಎಣ್ಣೆಗೆ 1 ಚಮಚ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿದರೂ ಕೂಡ ಮುಖದ ಹೋಳಪು ಹೆಚ್ಚುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ