ಮಾರ್ಗಶಿರ ಮಾಸದಲ್ಲಿ ನದಿ ಸ್ನಾನ ಮಾಡಿ ಈ ಮಂತ್ರ ಹೇಳಿದರೆ ಮಹಾವಿಷ್ಣು ಅನುಗ್ರಹಿಸುತ್ತಾನೆ

Krishnaveni K

ಗುರುವಾರ, 12 ಡಿಸೆಂಬರ್ 2024 (08:49 IST)
ಬೆಂಗಂಳೂರು: ಇದೀಗ ಮಾರ್ಗಶಿರ ಮಾಸವಾಗಿದ್ದು, ಈ ಮಾಸದಲ್ಲಿ ನದಿ ಸ್ನಾನ ಮಾಡಿ ಈ ಮಂತ್ರವನ್ನು ಜಪಿಸಿದರೆ ಸ್ವತಃ ಭಗವಾಮ್ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.

ಮಾರ್ಗಶಿರ ಮಾಶವು ಹಿಂದೂಗಳಿಗೆ ಅತ್ಯಂತ ಮಹತ್ವದ್ದಾಗಿದ್ದು ಈ ಮಾಸದಲ್ಲಿ ವಿಶೇಷವಾಗಿ ಮಹಾವಿಷ್ಣುವಿನ ಆರಾಧನೆ ಮಾಡಲಾಗುತ್ತದೆ. ಹಾಡು, ಭಜನೆಗಳ ಮೂಲಕ ಮಹಾವಿಷ್ಣುವಿನ ಪೂಜೆ ಮಾಡಿದರೆ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೀರಿ ಎಂಬ ನಂಬಿಕೆಯಿದೆ.

ವಿಶೇಷವಾಗಿ ಈ ಮಾಸದಲ್ಲಿ ನದಿ ಸ್ನಾನ ಮಾಡಿ ವಿಷ್ಣುವಿನ ಪೂಜೆ ಮಾಡಬೇಕು. ನದಿ ಸ್ನಾನ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನದಿ ಸ್ನಾನ ಮಾಡುವಾಗ ಗಾಯತ್ರಿ ಮಂತ್ರವನ್ನು ಪಠಿಸಬೇಕು. ಇಲ್ಲವೇ ‘ಓಂ ನಮೋ ನಾರಾಯಣಾಯ’ ಎನ್ನುವ ಮಂತ್ರವನ್ನು ಹೇಳುತ್ತಾ ಸ್ನಾನ ಮಾಡಬೇಕು.

ಹಿಂದೆ ಗೋಪಿಕಾ ಸ್ತ್ರೀಯರು ಹರಿಯನ್ನು ಸೇರುವ ಬಯಕೆಯಿಂದ ಪ್ರಾರ್ಥನೆ ಮಾಡಿದಾಗ ಶ್ರೀಕೃಷ್ಣನು ನದಿಸ್ನಾನ ಮಾಡಿ ಮಾಡುವಂತೆ ಸೂಚಿಸಿದನಂತೆ. ಅದರಂತೆ ಗೋಪಿಕಾ ಸ್ತ್ರೀಯರು ಪ್ರತಿನಿತ್ಯ ನದಿಸ್ನಾನ ಮಾಡುತ್ತಿದ್ದರಂತೆ. ಅದೇ ರೀತಿ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬೇಕಾದರೆ ಈ ಮಾಸದಲ್ಲಿ ನದಿ ಸ್ನಾನ ಮಾಡುವುದು ಅತ್ಯಂತ ಪವಿತ್ರವೆಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ