ಬೆಂಗಳೂರು: ಮಾರ್ಗಶೀರ್ಷ ಮಾಸ ಆರಂಭವಾಗಿದ್ದು ಈ ಮಾಸ ಹಿಂದೂಗಳ ಪಾಲಿಗೆ ಅತ್ಯಂತ ಪೂಜನೀಯ ಮಾಸವಾಗಿದೆ. ಈ ಮಾಸದಲ್ಲಿ ಯಾವ ದೇವರ ಪೂಜೆ ಮಾಡಬೇಕು ನೋಡಿ.
ಮಾರ್ಗಶೀರ್ಷ ಮಾಸವನ್ನು ಭಗವಾನ್ ಮಹಾವಿಷ್ಣು ಮತ್ತು ಶ್ರೀಕೃಷ್ಣನ ಪೂಜೆಗೆ ಅತ್ಯಂತ ಶ್ರೇಷ್ಠವಾದ ಮಾಸವೆಂದು ಪರಿಗಣಿಸಲಾಗುತ್ತದೆ. ಇದೇ ಮಾಸದಲ್ಲಿ ವೈಕುಂಠ ಏಕಾದಶಿಯಿರುತ್ತದೆ. ಈ ಮಾಸದಲ್ಲಿ ಭಜನೆ, ಕೀರ್ತನೆಗಳ ಮೂಲಕ ದೇವರ ಆರಾಧನೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಈ ಮಾಸದಲ್ಲಿ ಮಹಾವಿಷ್ಣುವಿಗೆ ವಿಶೇಷವಾದ ಶಂಖವನ್ನು ಪೂಜೆ ಮಾಡಬೇಕು. ಶಂಖಕ್ಕೆ ಪೂಜೆ ಮಾಡಿದರೆ ಸಾಕ್ಷತಾ ಮಹಾವಿಷ್ಣುವಿನ ಪಾಂಚಜನ್ಯಕ್ಕೆ ಪೂಜೆ ಮಾಡಿದಷ್ಟೇ ಶ್ರೇಷ್ಠವಾಗಿರುತ್ತದೆ. ವಿಶೇಷವಾಗಿ ಶಂಖವನ್ನು ಪೂಜೆ ಮಾಡುವಾಗ ಈ ಮಂತ್ರವನ್ನು ಹೇಳಿ ಪೂಜೆ ಮಾಡಿ. ಅದು ಹೀಗಿದೆ:
ಶಂಖವನ್ನು ಲಕ್ಷ್ಮಿಯ ಸಂಕೇತ ಎಂದು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಶಂಖಕ್ಕೆ ಪೂಜೆ ಮಾಡಿ ಅದರ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಸಾಕ್ಷಾತ್ ಲಕ್ಷ್ಮೀ ದೇವಿ ಪ್ರಸನನ್ನಳಾಗಿ ಮನೆಯಲ್ಲಿ ಧನ-ಕನಕಾದಿಗಳು ವೃದ್ಧಿಯಾಗುವಂತೆ ಆಶೀರ್ವದಿಸುತ್ತಾಳೆ.