ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕೆಂದರೆ ಈ ಮಂತ್ರ ಜಪಿಸಿ

Krishnaveni K

ಸೋಮವಾರ, 17 ಜೂನ್ 2024 (09:24 IST)
ಬೆಂಗಳೂರು: ಉದ್ಯೋಗ ಸಮಸ್ಯೆ ಅಥವಾ ನಿರುದ್ಯೋಗ ಸಮಸ್ಯೆ ಕಾಡಲು ಮುಖ್ಯ ಕಾರಣ ಶನಿ ದೇವನ ವಕ್ರದೃಷ್ಟಿಯಾಗಿರುತ್ತದೆ. ಹಾಗಿದ್ದರೆ ಉದ್ಯೋಗ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯವಾಗಿ ಶನಿದೇವನನ್ನು ಯಾವ ಮಂತ್ರದಿಂದ ಜಪಿಸಬೇಕು ಇಲ್ಲಿ ನೋಡಿ.

ಉದ್ಯೋಗ ಸಮಸ್ಯೆಗಳು ಬಂದಾಗ ಶನಿದೇವರ ಪ್ರಾರ್ಥನೆ ಮಾಡಬೇಕು. ನಿರುದ್ಯೋಗ ಸಮಸ್ಯೆಯಿದ್ದರೆ ಶನಿ ದೇವನನ್ನು ಸಂತೃಪ್ತಿಗೊಳಿಸಲು ಶನಿವಾರಗಳಂದು ಶನಿ ದೇವರ ಪೂಜೆ ಮಾಡುವುದು, ಕಾಗೆಗಳಿಗೆ ಧಾನ್ಯ ಹಾಕುವುದು ಇತ್ಯಾದಿ ಸೇವೆಗಳನ್ನು ಮಾಡಬಹುದು.

ಇದಲ್ಲದೆ ಹೋದರೆ ಶನಿವಾರಗಳಂದು ‘ಓಂ ಶನೈಶ್ಚರಾಯ ನಮಃ’ ಎನ್ನುವ ಜಪ ಮಾಡುತ್ತಾ ಶನಿದೇವನ ಪೂಜೆ ಮಾಡಿದರೆ ಉತ್ತಮ. ಶನಿ ದೇವರಿಗೆ ಸಂಬಂಧಿಸಿದ ಈ ಮಂತ್ರವನ್ನು 108 ಬಾರಿ ಜಪಿಸಿ ಭಕ್ತಿಯಿಂದ ಪೂಜೆ ಮಾಡಬೇಕು. ಇದರಿಂದ ಶನಿದೇವರ ವಕ್ರದೃಷ್ಟಿಯಿದ್ದರೂ ಕೊಂಚ ಮಟ್ಟಿಗೆ ಪ್ರಭಾವ ತಗ್ಗಬಹುದು.

ಇದಲ್ಲದೇ ಹೋದರೆ ಗಣಪತಿ ದೇವರ ಕುರಿತಾಗಿಯೂ ಪ್ರಾರ್ಥನೆ ಮಾಡಬಹುದು. ಬುಧವಾರದಂದು ‘ಓಂ ಗಂ ಸೌಮ್ಯಾಯ ಗಣಪತಯೇ, ವರವರದ ಸರ್ವಜನಂ ಮೆ ವಶ್ಮಾನಾಯ ಸ್ವಾಹ’ ಎಂದು ಉಪವಾಸ ವ್ರತವಿದ್ದು ಪೂಜೆ ಮಾಡಿ. ಇದರಿಂದ ನಿರುದ್ಯೋಗ ಅಥವಾ ಉದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ