ನವರಾತ್ರಿ ಬ್ಯಾನರ್, ಫ್ಲೆಕ್ಸ್ ಕಿತ್ತುಹಾಕದಂತೆ ಸಚಿವ ಸೂಚನೆ ನೀಡಿದ್ಯಾಕೆ?

ಸೋಮವಾರ, 8 ಅಕ್ಟೋಬರ್ 2018 (18:37 IST)
ನವರಾತ್ರಿ ಹೆಸರಲ್ಲಿ ಹಾಕಿದ ಬ್ಯಾನರ್, ಫ್ಲೆಕ್ಸ್ ತೆಗೆಯಬೇಡಿ ಅಂದಿದ್ದೇನೆ. ಮಹಾನಗರ ಪಾಲಿಕೆಗೆ ನಾನೇ ಸೂಚಿಸಿದ್ದೇನೆ. ಹೀಗಂತ ಸಚಿವರು ಹೇಳಿದ್ದಾರೆ.

ಮಂಗಳೂರು ನಗರದಾದ್ಯಂತ ನವರಾತ್ರಿ ಬ್ಯಾನರ್, ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾನರ್ ಗಳನ್ನ ಕಿತ್ತು ಹಾಕದಂತೆ ಪಾಲಿಕೆ ಅಧಿಕಾರಿಗಳಿಗೆ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.

ದಸಾರಾ ಸಮಯದಲ್ಲಿ ಯಾರಿಗೂ ಕಿರುಕುಳ ಮಾಡಬೇಡಿ ಅಂದಿದ್ದೇನೆ. ನಮ್ಮದೆಲ್ಲ ಹಾಕಿದ್ರೆ ತೆಗೆಯಿರಿ, ಹಬ್ಬದ ವಿಚಾರದಲ್ಲಿ ಹಾಕಿರೋದು ಬೇಡ ಅಂದಿದ್ದೇನೆ ಎಂದರು.

ಕುದ್ರೋಳಿ ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ 15 ಕೋಟಿ ಅನುದಾನ ಮೀಸಲು ವಿಚಾರ ಸಂಬಂಧ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಯಲ್ಲಿ ನಗರದ ಸ್ವಚ್ಛತೆ ಗಮನದಲ್ಲಿಟ್ಟುಕೊಂಡು ಬೋರ್ಡ್ ಗೆ ಸಲಹೆ ಸೂಚನೆ ಕೊಟ್ಟಿದ್ದೆ. ವೆನ್ ಲಾಕ್ ಆಸ್ಪತ್ರೆ, ರಸ್ತೆ, ಮೀನುಗಾರಿಕೆ ಮತ್ತು ಕಸಾಯಿಖಾನೆ ಸ್ವಚ್ಛತೆ ಬಗ್ಗೆ ಸಲಹೆ ಕೊಟ್ಟಿದ್ದೆ.

ಬಿಜೆಪಿ ಅಂಗಸಂಸ್ಥೆಯೇ ಕಸಾಯಿಖಾನೆಯನ್ನ ಹರಾಜಿನಲ್ಲಿ ಪಡೆದುಕೊಂಡು ಒಂದು ವರ್ಷ ನಡೆಸಿದ್ದರು. ಆಗ ಅವರು ಕೂಡ ಇಲ್ಲಿನ ಸ್ವಚ್ಛತೆ ಸರಿಯಿಲ್ಲ ಎಂಬ ಬಗ್ಗೆ ಮಾಹಿತಿ ನೀಡಿದ್ದರು. ಸ್ವಚ್ಛ ಭಾರತ ಸಾಕಾರವಾಗಬೇಕಾದ್ರೆ ಕೆಲವೊಂದು ಕೆಲಸ ಆಗಬೇಕು. ಹೀಗಾಗಿ ಕಸಾಯಿಖಾನೆ ಸ್ವಚ್ಛತೆ ಬಗ್ಗೆಯೂ ಗಮನ ಹರಿಸಲಾಗಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ