ದೀಪ ಹಚ್ಚುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Sampriya

ಭಾನುವಾರ, 12 ಜನವರಿ 2025 (09:58 IST)
Photo Courtesy X
ದೀಪ ಎಂದರೆ ಸಮೃದ್ಧಿ, ಶಾಂತಿ, ಬೆಳಕು. ಬದುಕಿನ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಚೆಲ್ಲುವ ಶಕ್ತಿ ದೀಪಕ್ಕಿದೆ. ಜ್ಞಾನದ ಸಂಕೇತವಾಗಿರುವ ದೀಪವನ್ನು ಸೂರ್ಯೋದಯ ಹಾಗೂ ಸೂರ್ಯಸ್ತದ ಸಮಯದಲ್ಲಿ ಹಚ್ಚುವುದರಿಂದ ಮನೆಗೆ ದಾರಿದ್ರ್ಯ ಪ್ರವೇಶಿಸುವುದಿಲ್ಲ.

ದೀಪದ ಕಲ್ಪನೆ ಬಂದಾಗಿನಿಂದ ನಾಗರಿಕತೆ ಹೊಸ ಶಕ್ತಿಯನ್ನು ಪಡೆಯಿತು. ಬೆಳಕೇ ಮನುಷ್ಯನಿಗೆ ಜ್ಞಾನಮೂಲವಾಗಿದೆ. ಅಂತೆಯೇ ಇದನ್ನು ಸಾಂಸ್ಕೃತಿಕ ಪರಂಪರೆಯಲ್ಲಿ ಪವಿತ್ರವಾದುದೆಂದು ಭಾವಿಸಲಾಗಿದೆ. ದೀಪದ ಮಹಿಮೆಯನ್ನರಿತ ಮಾನವ ಬೆಳಗ್ಗೆ ಹಾಗೂ ಸಂಜೆ ವೇಳೆ ಶ್ರದ್ಧೆ ಮತ್ತು ಭಕ್ತಿಯಿಂದ ದೇವರಿಗೆ ದೀಪವನ್ನು ಹಚ್ಚುತ್ತಾನೆ.

ಒಂದು ಮನೆಯ ಬೆಳಕಾಗಿರುವ ದೀಪವನ್ನು ಹಚ್ಚುವಾಗ ತುಂಬಾನೇ ಜಾಗೃತರಾಗಿರಬೇಕು.  ಇನ್ನೂ ದೇವರಿಗೆ ದೀಪ ಹಚ್ಚುವಾಗ ಕೆಲವೊಂದು ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬಾರದು. ದೀಪ ಹಚ್ಚಲು ಬೇಕಾಗಿರುವುದು ಬತ್ತಿ ಹಾಗೂ ಎಣ್ಣೆ. ದೇವರಿಗೆ ದೀಪವಿಡುವಾಗ ಯಾವುದೇ ಕಾರಣಕ್ಕೂ ಒಂದು ಬತ್ತಿಯಿಂದ ದೀಪ ಹಚ್ಚಬಾರದು. ಈ ರೀತಿ ಮಾಡುವುದರಿಂದ  ಕುಟುಂಬದಲ್ಲಿ ಬಿರುಕು ಮೂಡುತ್ತದೆ ಎಂಬುದು ನಂಬಿಕೆ. ಎರಡು ಎನ್ನುವುದು ಶ್ರೇಷ್ಠ. ಹಾಗಾಗಿ ಎರಡು ಬತ್ತಿಯನ್ನು ಜೋಡಿಸಿ ದೀಪ ಹಚ್ಚಿದರೆ ಮನೆ ಸಮೃದ್ಧವಾಗುತ್ತದೆ.

ಒಂದು ಬತ್ತಿಯಿಂದ ದೀಪ ಹಚ್ಚುವುದು ಅಶುಭ. ಅಗರಬತ್ತಿಯನ್ನು ಕೂಡಾ ಎರಡು ಹೊತ್ತಿಸಬೇಕು. ಹಾಗಾಗಿ ದೇವರಿಗೆ ದೀಪ ಹಚ್ಚುವಾಗ ತುಂಬಾನೇ ಜಾಗೃತರಾಗಿರಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ