Vaikunta Ekadashi: ವೈಕುಂಠ ಏಕಾದಶಿಯಂದು ಯಾವ ಮಂತ್ರ ಪಠಿಸಬೇಕು

Krishnaveni K

ಶುಕ್ರವಾರ, 10 ಜನವರಿ 2025 (08:50 IST)
ಬೆಂಗಳೂರು: ಇಂದು ವೈಕುಂಠ ಏಕಾದಶಿಯಾಗಿದ್ದು ಆ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗಿ ಮೋಕ್ಷ ಪ್ರಾಪ್ತಿಯಾಗಲು ಈ ಒಂದು ಮಂತ್ರವನ್ನು ಪಠಿಸಿದರೆ ಉತ್ತಮ.

ವೈಕುಂಠ ಏಕಾದಶಿಯಂದು ಉಪವಾಸವಿದ್ದು ಮಹಾವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಜೊತೆಗೆ ಈ ದಿನ ಮಹಾವಿಷ್ಣುವಿನನ್ನು ಕುರಿತು ಪ್ರಾರ್ಥನೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ. ಇಂದು ಉಪವಾಸವಿದ್ದು ಪೂಜೆ ಮಾಡುವುದರಿಂದ ನಮ್ಮ ಪೂರ್ವಜರಿಗೂ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಮಹಾವಿಷ್ಣುವಿಗೆ ತುಳಸಿಯಿಂದರೆ ಅರ್ಚನೆ ಮಾಡುತ್ತಾ ಪೂಜೆ ಮಾಡಿದರೆ ಅತ್ಯಂತ ಶ್ರೇಯಸ್ಕರವಾಗಿದೆ. ವಿಶೇಷವಾಗಿ ವಿಷ್ಣು ಗಾಯತ್ರಿ ಮಂತ್ರವನ್ನು ಇಂದು ಪಠಿಸಬೇಕು.

ವಿಷ್ಣು ಗಾಯತ್ರಿ ಮಂತ್ರ ಇಲ್ಲಿದೆ:
ಓಂ ನಾರಾಯಣ ವಿದ್ಮಹೇ
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್

ಇದರ ಜೊತೆಗೆ ಮಹಾವಿಷ್ಣುವಿನ ಮೂಲ ಮಂತ್ರವಾದ ಓಂ ನಮೋ ನಾರಾಯಣಾಯ ಮಂತ್ರವನ್ನು 108 ಬಾರಿ ಜಪಿಸಿದರೆ ಉತ್ತಮ. ವಿಶೇಷವಾಗಿ ಮಂತ್ರ ಜಪ ಮಾಡುವಾಗ ಕೈಯಲ್ಲಿ ರುದ್ರಾಕ್ಷಿ ಹಿಡಿದು, ತುಳಸಿಯಿಂದ ಅರ್ಚನೆ ಮಾಡುತ್ತಾ ಪಠಣ ಮಾಡಬೇಕು. ಇದರಿಂದ ಮನೆಯಲ್ಲಿ ಧನ-ಧಾನ್ಯ, ಸುಖ-ಸಮೃದ್ಧಿಗೆ ಯಾವುದೇ ಕೊರತೆಯಾಗದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ