ಮನೆಯಲ್ಲಿ ಇಂತಹ ಗಿಡಗಳನ್ನು ನೆಡಬೇಡಿ

ಮಂಗಳವಾರ, 1 ಡಿಸೆಂಬರ್ 2020 (07:28 IST)
ಬೆಂಗಳೂರು : ಮನೆಯ ಸುತ್ತಮುತ್ತಲೂ ಗಿಡಗಳು ಬೆಳೆದಿರುತ್ತವೆ. ಆದರೆ ಇಂತಹ ಗಿಡಗಳನ್ನು ಕಿತ್ತುಹಾಕಬೇಕು. ಇಲ್ಲವಾದರೆ ಇದರಿಂದ ಮನೆಯಲ್ಲಿ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತದೆ.

ಹೌದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸುತ್ತಮುತ್ತ ಮುಳ್ಳಿನ ಮರಗಳು ಮತ್ತು ಗಿಡಗಳನ್ನು ಬೆಳೆಯಲು ಬಿಡಬಾರದು. ನಿಂಬೆ, ಕಳ್ಳಿಮುಂತಾದ ಮರ ಗಿಡಗಳು ಬೆಳೆಯಲು ಬಿಡಬಾರದು. ಯಾಕೆಂದರೆ ಈ ಗಿಡಗಳು ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ.

ಹಾಗೇ ಮನೆಯಲ್ಲಿ ಗುಲಾಬಿ ಗಿಡ ನೆಟ್ಟರೆ ಶುಭ. ಆದರೆ ಕಪ್ಪು ಬಣ್ಣದ ಗುಲಾಬಿ ಗಿಡ ನೆಡಬಾರದು. ಇದರಿಂದ ಮನೆಯಲ್ಲಿ ಸದಾಕಾಲ ಚಿಂತೆ ಕಾಡುತ್ತದೆ. ಹಾಲು ಹೊರಹಾಕುವ ಗಿಡಗಳನ್ನು ಮನೆಯೊಳಗೆ ನೆಡಬಾರದು. ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ