ಕಾಲಿನ ಉಗುರುಗಳಿಗೆ ಸೋಂಕು ತಗುಲಿದರೆ ಈ ಮನೆಮದ್ದನ್ನು ಹಚ್ಚಿ
ಸೋಮವಾರ, 30 ನವೆಂಬರ್ 2020 (15:56 IST)
ಬೆಂಗಳೂರು : ಕಾಲಿನ ಉಗುರುಗಳಲ್ಲಿ ಶಿಲೀಂಧ್ರ ಸೋಂಕು ಉಂಟಾಗುತ್ತದೆ. ಇದರಿಂದ ಕಾಲುಗುರುಗಳಲ್ಲಿ ನೋವು ಕಾಣಿಸುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ.
ಉಗುರು ಶಿಲೀಂಧ್ರದ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಟೀ ಟ್ರೀ ಆಯಿಲ್ ತುಂಬಾ ಸಹಕಾರಿ. 3 ಹನಿ ಟೀ ಟ್ರೀ ಆಯಿಲ್ ಗೆ 2 ಹನಿ ತೆಂಗಿನೆಣ್ಣೆ ಬೆರೆಸಿ ಕಾಟನ್ ಪ್ಯಾಡ್ ನ್ನು ಅದ್ದಿ ಬಾಧಿತ ಕಾಲುಗುರುಗಳ ಮೇಲೆ ಹಚ್ಚಿ. ಇದರಿಂದ ಶಿಲೀಂಧ್ರಗಳು ನಾಶವಾಗಿ ಬೇಗ ವಾಸಿಯಾಗುತ್ತದೆ.