ಸ್ನಾನಕ್ಕೆ ಮನೆಯಲ್ಲಿಯೇ ತಯಾರಿಸಿದ ಈ ಬಾಡಿವಾಶ್ ಒಮ್ಮೆ ಬಳಸಿ ನೋಡಿ!
ಸೋಮವಾರ, 30 ನವೆಂಬರ್ 2020 (15:53 IST)
ಬೆಂಗಳೂರು : ಸ್ನಾನಕ್ಕೆ ಸೋಪ್ ಗಳನ್ನು ಬಳಸಿದಾಗ ಅದರಿಂದ ಚರ್ಮ ಮತ್ತಷ್ಟು ಹಾಳಾಗುತ್ತದೆ. ಈ ಸಮಸ್ಯೆ ನಿವಾರಿಸಲು ಮನೆಯಲ್ಲಿಯೇ ಬಾಡಿವಾಶ್ ಗಳನ್ನು ತಯಾರಿಸಿ ಬಳಸಿ.
½ ಕಪ್ ತೆಂಗಿನ ಹಾಲು, ¾ ಕಪ್ ಕ್ಯಾಸ್ಟೈಲ್ ಸೋಪ್ ದ್ರವ, 3 ಚಮಚ ಜೊಜೊಬಾ ಎಣ್ಣೆ, 2 ಚಮಚ ಗ್ಲಿಸರಿನ್, 1 ಚಮಚ ಹಸಿ ಜೇನುತುಪ್ಪ, 5 ಹನಿ ಟೀ ಟ್ರೀ ಆಯಿಲ್, 5 ಹನಿ ಲ್ಯಾವೆಂಡರ್ ಆಯಿಲ್ ಇವಿಷ್ಟನ್ನು ತೆಗೆದುಕೊಂಡು ಒಂದು ಬಾಟಲಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಸ್ನಾನ ಮಾಡುವಾಗ ಬಾಡಿ ವಾಶ್ ಆಗಿ ಬಳಸಿದರೆ ನಿಮ್ಮ ಚರ್ಮ ಮೃದುವಾಗಿ ಹೊಳೆಯುತ್ತದೆ.